ಸೋಮವಾರ, ಜನವರಿ 27, 2020
20 °C

ಜಿಎಸ್‌ಟಿ ದರದಲ್ಲಿ ಬದಲಾವಣೆ ಇಲ್ಲ: ಸುಶೀಲ್‌ ಕುಮಾರ್ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ವರಮಾನದಲ್ಲಿ ಸ್ಥಿರತೆ ಸಾಧಿಸದ ಹೊರತು ಜಿಎಸ್‌ಟಿ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ’ ಎಂದು ಐಜಿಎಸ್‌ಟಿ ಸಚಿವರ ಸಮಿತಿ ಸಂಚಾಲಕ ಸುಶೀಲ್‌ ಕುಮಾರ್ ಮೋದಿ ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ಸರಕುಗಳ ತೆರಿಗೆ ದರದಲ್ಲಿ ಏರಿಕೆ ಅಥವಾ ಇಳಿಕೆ ಮಾಡುವುದು ಹಾಗೂ ತೆರಿಗೆ ದರಗಳಲ್ಲಿಯೇ ಬದಲಾವಣೆ ಮಾಡುವಂತಹಾ ನಿರ್ಧಾರಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಖರೀದಿ ಸಾಮರ್ಥ್ಯ ಇಳಿಮುಖವಾಗಿದೆ. ಹೀಗಾಗಿ ರಾಜ್ಯಗಳು ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡುವುದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಜಿಎಸ್‌ಟಿ ದರದಲ್ಲಿ (ಶೇ 5, ಶೇ 12, ಶೇ 18, ಶೇ 28) ಬದಲಾವಣೆ ಮಾಡಲೂ ಇದು ಸೂಕ್ತ ಸಮಯ ಅಲ್ಲ’ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು