ಶುಕ್ರವಾರ, ಫೆಬ್ರವರಿ 26, 2021
19 °C

ಲಾಕ್‌ಡೌನ್: ದೆಹಲಿಯ ಸ್ಯಾಮ್‌ಸಂಗ್ ಮೊಬೈಲ್ ಘಟಕ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಕಾರಣ ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ಸ್ಯಾಮ್‌‌ಸಂಗ್ ಮೊಬೈಲ್ ತಯಾರಿಕಾ ಘಟಕ ಶುಕ್ರವಾರದಿಂದ ಪುನರಾರಂಭವಾಗಿದೆ.

ದೆಹಲಿ ಸರ್ಕಾರ ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡಿದ ಕಾರಣ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿದ್ದರಿಂದ ಸ್ಯಾಮ್‌‌ಸಂಗ್ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು.

ಸರ್ಕಾರವು ಆದಷ್ಟು ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಿ ಕೆಲಸ ಮಾಡಲು ಅವಕಾಶ ನೀಡಿದೆ. ಈ ಕಾರಣದಿಂದಾಗಿ ಶುಕ್ರವಾರ 3 ಸಾವಿರ ಕಾರ್ಮಿಕರನ್ನು ಶುಕ್ರವಾರ ಬೆಳಿಗ್ಗೆ ಪ್ರತ್ಯೇಕ ಬಸ್‌ಗಳಲ್ಲಿ ಘಟಕಕ್ಕೆ ಕರೆತರಲಾಯಿತು. 

ನೊಯ್ಡಾದಲ್ಲಿರುವ ಘಟಕದಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ಬಳಸುವುದೂ ಸೇರಿದಂತೆ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಜಾರಿಗೆ ತಂದಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸ್ಥಳೀಯ ಆಡಳಿತ ಮೊಬೈಲ್ ಸಂಸ್ಥೆಗೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು