ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಇ–ಕಾಮರ್ಸ್‌ಗೆ ವಿರೋಧವಿಲ್ಲ: ಪೀಯೂಷ್‌ ಗೋಯಲ್

Published 22 ಆಗಸ್ಟ್ 2024, 15:28 IST
Last Updated 22 ಆಗಸ್ಟ್ 2024, 15:28 IST
ಅಕ್ಷರ ಗಾತ್ರ

ಮುಂಬೈ: ‘ಭಾರತವು ಇ–ಕಾಮರ್ಸ್ ಕಂಪನಿಗಳ ವಿರುದ್ಧವಿಲ್ಲ. ಆದರೆ, ಕಂಪನಿಗಳು ನ್ಯಾಯೋಚಿತ ಹಾಗೂ ಪ್ರಾಮಾಣಿಕವಾಗಿ ವ್ಯವಹಾರ ನಡೆಸುವುದನ್ನು ಅಪೇಕ್ಷಿಸುತ್ತದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ದೈತ್ಯ ಕಂಪನಿಗಳು ಸ್ಪರ್ಧಿಸಲು ಸಾಧ್ಯವೇ ಇಲ್ಲದಷ್ಟು ಕಡಿಮೆ ಬೆಲೆಯನ್ನು ನಿಗದಿ ಮಾಡುತ್ತಿವೆ. ಇದರಿಂದ ಸ್ಥಳೀಯ ಮಾರುಕಟ್ಟೆ ಹಾಗೂ ಉದ್ಯೋಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಗೋಯಲ್‌ ಹೇಳಿದ್ದು, ಚರ್ಚೆಗೆ ಗ್ರಾಸವಾಗಿತ್ತು.  

‘ನಾವು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆಹ್ವಾನ ನೀಡುತ್ತೇವೆ. ಹೊಸ ತಂತ್ರಜ್ಞಾನಕ್ಕೂ ಅಷ್ಟೇ ಮನ್ನಣೆ ನೀಡುತ್ತೇವೆ. ಜಾಗತಿಕ ಮಟ್ಟದಲ್ಲಿ ಉನ್ನತ ಸ್ತರದಲ್ಲಿ ಇರುವುದಕ್ಕೆ ಇಚ್ಛಿಸುತ್ತೇವೆ. ಯಾವುದೇ ಕಂಪನಿಯ ವಿರುದ್ಧವಿಲ್ಲ. ಗ್ರಾಹಕರಿಗೆ ಸರಕು ಮತ್ತು ಸೇವೆ ಪೂರೈಕೆಯಲ್ಲಿ ಪ್ರಾಮಾಣಿಕತೆ ಕಾಯ್ದುಕೊಳ್ಳಬೇಕು ಎಂಬುದು ಭಾರತದ ಅಪೇಕ್ಷೆಯಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT