ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ ಕೃಷಿ ಸಚಿವಾಲಯ ಯೂಟರ್ನ್‌

Last Updated 27 ನವೆಂಬರ್ 2018, 18:34 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದತಿ ನಿರ್ಧಾರದಿಂದ ಉದ್ಭವಿಸಿದ್ದ ನಗದು ಕೊರತೆಯು ದೇಶದಾದ್ಯಂತ ಲಕ್ಷಾಂತರ ರೈತರನ್ನು ಸಂಕಷ್ಟಕ್ಕೆ ದೂಡಿತ್ತು ಎನ್ನುವ ತನ್ನ ಈ ಮೊದಲಿನ ತೀರ್ಮಾನಕ್ಕೆ ಕೇಂದ್ರ ಕೃಷಿ ಸಚಿವಾಲಯವು ಈಗ ಸಂಪೂರ್ಣ ತದ್ವಿರುದ್ಧವಾದ ನಿಲುವು ಪ್ರಕಟಿಸಿದೆ.

ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಸಲ್ಲಿಸಿದ ಪರಿಷ್ಕೃತ ಟಿಪ್ಪಣಿಯಲ್ಲಿ, ನೋಟು ರದ್ದತಿಯಿಂದ ಕೃಷಿ ವಲಯಕ್ಕೆ ಹೆಚ್ಚಿನ ಪ್ರಯೋಜನ ಲಭಿಸಿದೆ. ದತ್ತಾಂಶ ಕ್ರೋಡೀಕರಣದಲ್ಲಿನ ಲೋಪದಿಂದಾಗಿ ಈ ಮೊದಲಿನ ದೋಷಪೂರಿತ ತೀರ್ಮಾನಕ್ಕೆ ಬರಲಾಗಿತ್ತು ಎಂದು ಕಾರಣ ನೀಡಿದೆ.

ನೋಟು ರದ್ದತಿಯಿಂದ ಬೀಜ, ರಸಗೊಬ್ಬರಗಳ ಮಾರಾಟ ಹೆಚ್ಚಿತ್ತು. ಬಿತ್ತನೆ ಪ್ರದೇಶವೂ ವಿಸ್ತರಣೆಯಾಗಿತ್ತು ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT