ಪೆಟ್ರೋಲ್ ಮಾರಾಟದಿಂದ ಲೀಟರ್ಗೆ ₹10 ಲಾಭ, ಡೀಸೆಲ್ನಿಂದ ₹6.5 ನಷ್ಟ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಿಂದ ₹ 10ರಷ್ಟು ಲಾಭ ಗಳಿಸಿವೆ. ಇದೇ ವೇಳೆ ಲೀಟರ್ ಡೀಸೆಲ್ ಮಾರಾಟದಿಂದ ಅವುಗಳಿಗೆ ₹ 6.5ರಷ್ಟು ನಷ್ಟವಾಗಿದೆ.
ಹಿಂದೆ ಆಗಿದ್ದ ನಷ್ಟವನ್ನು ಭರಿಸುವ ಹಾಗೂ ಡೀಸೆಲ್ ಮಾರಾಟದಿಂದ ಈಗ ಆಗುತ್ತಿರುವ ನಷ್ಟವನ್ನು ಭರಿಸುವ ಉದ್ದೇಶದಿಂದ ಅವು ಪೆಟ್ರೋಲ್ ಬೆಲೆಯನ್ನು ತಗ್ಗಿಸಿಲ್ಲ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಬಿಪಿಸಿಎಲ್) ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಎಚ್ಪಿಸಿಎಲ್) ಕಂಪನಿಗಳು 2022ರ ಏಪ್ರಿಲ್ 6ರ ನಂತರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ.
‘2022ರ ಜೂನ್ 24ಕ್ಕೆ ಕೊನೆಗೊಂಡ ವಾರದಲ್ಲಿ ಕಂಪನಿಗಳು ಲೀಟರ್ ಪೆಟ್ರೋಲ್ ಮಾರಾಟದಿಂದ ₹ 17.4ರಷ್ಟು, ಡೀಸೆಲ್ ಮಾರಾಟದಿಂದ ₹ 27.7ರಷ್ಟು ನಷ್ಟ ಅನುಭವಿಸಿದ್ದವು. ಇದು ದಾಖಲೆಯ ನಷ್ಟವಾಗಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಪೆಟ್ರೋಲ್ ಮಾರಾಟದಿಂದ ಲಾಭ ಆಗುತ್ತಿದೆ, ಡೀಸೆಲ್ ಮಾರಾಟದ ನಷ್ಟ ಕಡಿಮೆ ಆಗಿದೆ’ ಎಂದು ಐಸಿಐಸಿಐ ಸೆಕ್ಯುರಿಟೀಸ್ ಅಂದಾಜು ಮಾಡಿದೆ.
ಕಚ್ಚಾ ತೈಲದ ಬೆಲೆ ಹೆಚ್ಚಿದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸದ ಕಾರಣದಿಂದಾಗಿ ಕಂಪನಿಗಳು ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ₹ 21,201 ಕೋಟಿ ನಷ್ಟ ಅನುಭವಿಸಿವೆ. ಕಂಪನಿಗಳಿಗೆ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂಬ ಆಗ್ರಹವನ್ನು ತೈಲ ಸಚಿವಾಲಯವು, ಹಣಕಾಸು ಸಚಿವಾಲಯದ ಮುಂದಿರಿಸಲು ನಿರ್ಧರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.