ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ ಇ–ಸ್ಕೂಟರ್‌: ಟೆಸ್ಟ್‌ ರೈಡ್ ಸೌಲಭ್ಯ ದೇಶದಾದ್ಯಂತ ವಿಸ್ತರಣೆ

Last Updated 20 ನವೆಂಬರ್ 2021, 12:11 IST
ಅಕ್ಷರ ಗಾತ್ರ

ನವದೆಹಲಿ: ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ವಿದ್ಯುತ್‌ ಚಾಲಿತ ಸ್ಕೂಟರ್‌ಗಳನ್ನು ಗ್ರಾಹಕರಿಗೆ ‘ಟೆಸ್ಟ್‌ ರೈಡ್‌’ ನೀಡುವುದನ್ನುದೇಶದಾದ್ಯಂತ ವಿಸ್ತರಣೆ ಮಾಡಿರುವುದಾಗಿ ಶನಿವಾರ ತಿಳಿಸಿದೆ.

ಒಂದು ಸಾವಿರಕ್ಕೂ ಅಧಿಕ ನಗರಗಳು ಮತ್ತು ಪ‍ಟ್ಟಣಗಳಲ್ಲಿನ ಗ್ರಾಹಕರು ‘ಓಲಾ ಎಸ್‌1’ ಎಲೆಕ್ಟ್ರಿಕ್‌ ಸ್ಕೂಟರ್‌ ಚಲಾಯಿಸಿ ಪರಿಶೀಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 10ರಂದು ಬೆಂಗಳೂರು, ದೆಹಲಿ, ಅಹಮದಾಬಾದ್ ಮತ್ತು ಕೋಲ್ಕತ್ತಾದಲ್ಲಿ ಮೊದಲ ಬಾರಿಗೆ ಈ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಆ ಬಳಿಕ ನವೆಂಬರ್‌ 19ರಂದು ಚೆನ್ನೈ, ಹೈದರಾಬಾದ್‌, ಕೊಚ್ಚಿ, ಮುಂಬೈ ಮತ್ತು ಪುಣೆ ನಗರಗಳಿಗೂ ವಿಸ್ತರಿಸಲಾಯಿತು. ಇದೀಗ ಡಿಸೆಂಬರ್ 15ರ ಒಳಗಾಗಿ ಎಲ್ಲಾ ಗ್ರಾಹಕರೂ ಸ್ಕೂಟರ್‌ ಚಲಾಯಿಸಿ ನೋಡುವಂತೆ ಆಗಬೇಕು ಎನ್ನುವ ಸಲುವಾಗಿ ಈ ಸೌಲಭ್ಯವನ್ನು ದೇಶದಾದ್ಯಂತ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ.

ಟೆಸ್ಟ್‌ ರೈಡ್‌ಗೆ ಸೌಲಭ್ಯ ಕಲ್ಪಿಸಿರುವುದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತಿವಾಗಿದೆ. ಪ್ರತಿ ದಿನವೂ ಸಾವಿರಾರು ಗ್ರಾಹಕರು ಸ್ಕೂಟರ್‌ ಅನ್ನು ಚಲಾಯಿಸಿ ನೋಡುತ್ತಿದ್ದಾರೆ. ಓಲಾ ಎಸ್‌1 ಸ್ಕೂಟರಿನ ವಿನ್ಯಾಸ, ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕಂಪನಿಯ ಮುಖ್ಯ ವಹಿವಾಟು ಅಧಿಕಾರಿ ಅರುಣ್‌ ಸರ್‌ದೇಶ್‌ಮುಖ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT