ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌ ಗೋಲ್ಡ್‌ನಿಂದ ‘ಒಂದು ಭಾರತ ಒಂದೇ ಚಿನ್ನದ ದರ’ ಯೋಜನೆ

Last Updated 28 ಅಕ್ಟೋಬರ್ 2020, 16:12 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನದ ಗುಣಮಟ್ಟ ಮತ್ತು ಶುದ್ಧತೆಯಲ್ಲಿ ರಾಜಿ ಮಾಡಿಕೊಳ್ಳದೆಯೇ, ಬಿಐಎಸ್‌ ಹಾಲ್‌ಮಾರ್ಕ್ ಇರುವ ಚಿನ್ನವನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ದರದಲ್ಲಿ ಮಾರಾಟ ಮಾಡುವ ‘ಒಂದು ಭಾರತ ಒಂದೇ ಚಿನ್ನದ ದರ’ ಯೋಜನೆಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಚಾಲನೆ ನೀಡಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರಗಳು ಪಾರದರ್ಶಕವಾಗಿವೆ ಮತ್ತು ಜಗತ್ತಿನ ಎಲ್ಲಾ ದೇಶಗಳಿಗೂ ಒಂದೇ ರೀತಿಯ ಕಸ್ಟಮ್ಸ್‌ ಸುಂಕ, ತೆರಿಗೆ ವಿಧಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ರಾಜ್ಯದಿಂದ ರಾಜ್ಯಕ್ಕೆ ಚಿನ್ನದ ದರ ಬೇರೆ ಬೇರೆ ಆಗಿದೆ. ಪ್ರತಿ ಗ್ರಾಂ ಚಿನ್ನಕ್ಕೆ ಗರಿಷ್ಠ ₹ 400ರವರೆಗೆ ವ್ಯತ್ಯಾಸ ಕಂಡುಬರುತ್ತದೆ. ಇದನ್ನು ಗಮನಿಸಿ ರಾಷ್ಟ್ರವ್ಯಾಪಿ ಏಕರೂಪ‍ದ ದರ ನಿಗದಿಪಡಿಸುವ ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಮಲಬಾರ್ ಗೋಲ್ಡ್ ಹೇಳಿದೆ.

ದೇಶದಲ್ಲಿ ಚಿನ್ನವನ್ನು ಉಳಿತಾಯ ಮತ್ತು ಹೂಡಿಕೆಯ ಸಾಧನವಾಗಿಯೂ ಪರಿಗಣಿಸಲಾಗುತ್ತಿದೆ. ‘ಒಂದು ಭಾರತ ಒಂದೇ ಚಿನ್ನದ ದರ’ ಯೋಜನೆಯು ದೇಶದಾದ್ಯಂತ ನ್ಯಾಯಸಮ್ಮತವಾದ ದರದಲ್ಲಿ ಚಿನ್ನ ಖರೀದಿಯನ್ನು ಗ್ರಾಹಕರಿಗೆ ಖಾತರಿಪಡಿಸುತ್ತದೆ. ಅಲ್ಲದೆ, ದೇಶದಲ್ಲಿ ಎಲ್ಲಿಯೇ ಖರೀದಿಸಿದ್ದರೂ ಆ ಚಿನ್ನವನ್ನು ಮಾರಾಟ ಮಾಡುವಾಗ ಬೈಬ್ಯಾಕ್‌ ಭರವಸೆಯೂ ಇಲ್ಲಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಕೋವಿಡ್‌–19 ಸಾಂಕ್ರಾಮಿಕವು ಎಲ್ಲಾ ಕ್ಷೇತ್ರಗಳ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಿದ್ದರೂ ಚಿನ್ನದ ಬೇಡಿಕೆ ಹೆಚ್ಚಳದಲ್ಲಿ ಸ್ಥಿರತೆ ಇದೆ. ಇದನ್ನು ಗಮನಿಸಿದರೆ, ಭಾರತೀಯರು ಚಿನ್ನವನ್ನು ಉಳಿತಾಯ ಮತ್ತು ಸಂಪತ್ತು ಸೃಷ್ಟಿಸುವ ಸಾಧನವಾಗಿ ಪರಿಗಣಿಸಿರುವುದು ದೃಢವಾಗುತ್ತದೆ. ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಮಲಬಾರ್‌ ಸಮೂಹದ ಅಧ್ಯಕ್ಷ ಎಂ.ಪಿ. ಅಹ್ಮದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT