ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎನ್‌ಜಿಸಿ: ಶೇ 1.5ರಷ್ಟು ಷೇರು ಮಾರಲಿರುವ ಕೇಂದ್ರ

Last Updated 29 ಮಾರ್ಚ್ 2022, 16:28 IST
ಅಕ್ಷರ ಗಾತ್ರ

ನವದೆಹಲಿ (‍ಪಿಟಿಐ): ಕೇಂದ್ರ ಸರ್ಕಾರವು ಒಎನ್‌ಜಿಸಿ ಕಂಪನಿಯಲ್ಲಿ ತಾನು ಹೊಂದಿರುವ ಷೇರುಗಳಲ್ಲಿ ಶೇಕಡ 1.5ರವರೆಗೆ ಮಾರಾಟ ಮಾಡಲಿದ್ದು, ಈ ಮೂಲಕ ₹ 3,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ.

ಕೇಂದ್ರ ಸರ್ಕಾರವು ಷೇರು ಮಾರುಕಟ್ಟೆ ಮೂಲಕ ಈ ಷೇರುಗಳನ್ನು ಮಾರಾಟ ಮಾಡಲಿದೆ (ಒಎಫ್‌ಎಸ್‌). ಇದು ಮಾರ್ಚ್ 30, 31ರಂದು ನಡೆಯಲಿದೆ.

ಒಎಫ್‌ಎಸ್‌ ವೇಳೆ ಪ್ರತಿ ಷೇರಿನ ಬೆಲೆಯನ್ನು ₹ 159ಕ್ಕೆ ನಿಗದಿ ಮಾಡಲಾಗಿದೆ. ಇದು ಒಎನ್‌ಜಿಸಿ ಷೇರಿನ ಮಂಗಳವಾರದ ಬೆಲೆಗಿಂತ ಶೇ 7ರಷ್ಟು ಕಡಿಮೆ. ಒಎನ್‌ಜಿಸಿ ಕಂಪನಿಯಲ್ಲಿ ಕೇಂದ್ರ ಸರ್ಕಾರವು ಈಗ ಶೇ 60.41ರಷ್ಟು ಪಾಲು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT