ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಶಃ ಲಾಕ್‌ಡೌನ್‌ನಿಂದಲೂ ಕಾರ್ಮಿಕರು, ಸರಕುಗಳ ಚಲನೆಗೆ ಅಡ್ಡಿ: ಸಿಐಐ ಸಮೀಕ್ಷೆ

Last Updated 11 ಏಪ್ರಿಲ್ 2021, 14:39 IST
ಅಕ್ಷರ ಗಾತ್ರ

ನವದೆಹಲಿ: ‘ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸುವುದರಿಂದ ಕಾರ್ಮಿಕರ ಸಂಚಾರ ಮತ್ತು ಸರಕುಗಳ ಸಾಗಣೆಗೆ ಅಡ್ಡಿಯಾಗಿ, ಕೈಗಾರಿಕೆಗಳ ಉತ್ಪಾದನೆ ಮೇಲೆಯೂ ಪರಿಣಾಮ ಆಗುವ ಸಾಧ್ಯತೆ ಇದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಮೀಕ್ಷೆ ಹೇಳಿದೆ.

ಎರಡನೇ ಅಲೆಯ ಹರಡುವಿಕೆಯನ್ನು ತಡೆಗಟ್ಟಲು ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆಗಳ ಜೊತೆಗೆ ಕೋವಿಡ್‌ ಕರ್ಫ್ಯೂ ಮತ್ತು ಕಿರು ಕಂಟೈನ್‌ಮೆಂಟ್‌ ಕ್ರಮಗಳು ಪರಿಣಾಮಕಾರಿ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕಂಪನಿಗಳ ಸಿಇಒಗಳು ಹೇಳಿದ್ದಾರೆ.

ಭಾಗಶಃ ಲಾಕ್‌ಡೌನ್‌ನಿಂದ ಕಾರ್ಮಿಕರ ಓಡಾಟಕ್ಕೆ ಅಡ್ಡಿಯಾಗಲಿದ್ದು, ಉತ್ಪಾದನೆಯ ಮೇಲೆ ಹೊಡೆತ ಬೀಳಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಹೇಳಿದ್ದಾರೆ.

ಸರಕು ಸಾಗಣೆಯ ಮೇಲೆ ಪರಿಣಾಮ ಉಂಟಾದಲ್ಲಿ ಶೇ 50ರವರೆಗೂ ಉತ್ಪಾದನಾ ನಷ್ಟ ಆಗಲಿದೆ ಎಂದು ಸಿಇಒಗಳ ಪೈಕಿಶೇ 56ರಷ್ಟು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT