ಶನಿವಾರ, ಜೂನ್ 25, 2022
24 °C

ಪೇಟಿಎಂ ನಷ್ಟ ₹ 761 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾವತಿ ಮತ್ತು ಹಣಕಾಸು ಸೇವೆಗಳನ್ನು ನೀಡುವ ಪೇಟಿಎಂನ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ನ ನಷ್ಟವು 2022ರ ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 761 ಕೋಟಿಗೆ ತಲುಪಿದೆ.

ಪಾವತಿ ವ್ಯವಸ್ಥೆಯ ನಿರ್ವಹಣಾ ಶುಲ್ಕ ಮತ್ತು ಉದ್ಯೋಗಿಗಳ ವೆಚ್ಚದಲ್ಲಿ ಏರಿಕೆ ಆಗುತ್ತಿರುವುದರಿಂದ ನಷ್ಟದಲ್ಲಿ ಏರಿಕೆ ಆಗಿದೆ ಎಂದು ಅದು ತಿಳಿಸಿದೆ. 2021–22ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ನಷ್ಟವು ₹ 441 ಕೋಟಿ ಇತ್ತು.

ತ್ರೈಮಾಸಿಕದಲ್ಲಿ ಕಾರ್ಯಾಚರಣಾ ವರಮಾನ ₹ 815 ಕೋಟಿಯಿಂದ ₹ 1,540 ಕೋಟಿಗೆ ಶೇ 89ರಷ್ಟು ಹೆಚ್ಚಾಗಿದೆ. ಉದ್ಯೋಗಿಗಳ ಮೇಲಿನ ವೆಚ್ಚವು ₹ 347 ಕೋಟಿಯಿಂದ ₹ 863 ಕೋಟಿಗೆ ಎರಡು ಪಟ್ಟು ಹೆಚ್ಚಾಗಿದೆ. ಪಾವತಿಗಳ ನಿರ್ವಹಣಾ ಶುಲ್ಕವು ಶೇ 52ರಷ್ಟು ಹೆಚ್ಚಾಗಿ ₹ 774 ಕೋಟಿಗೆ ಏರಿಕೆ ಆಗಿದೆ.

2021–22ನೇ ಹಣಕಾಸು ವರ್ಷಕ್ಕೆ ಕಂಪನಿಯ ನಷ್ಟವು ₹2,396 ಕೋಟಿ ಆಗಿದೆ. 2020–21ನೇ ಹಣಕಾಸು ವರ್ಷದಲ್ಲಿ ನಷ್ಟವು ₹ 1,705 ಕೋಟಿ ಇತ್ತು. ಕಾರ್ಯಾಚರಣಾ ವರಮಾನ ಶೇ 77ರಷ್ಟು ಹೆಚ್ಚಾಗಿದ್ದು, ₹ 4,974 ಕೋಟಿಗಳಿಗೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು