ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಸಿಗೆ: ದೇಶದ ವಿದ್ಯುತ್‌ ಬೇಡಿಕೆ ಹೆಚ್ಚಳ

Published 25 ಮೇ 2024, 14:19 IST
Last Updated 25 ಮೇ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಬೇಸಿಗೆಯಲ್ಲಿ ದೇಶದ ವಿದ್ಯುತ್‌ ಬೇಡಿಕೆಯು ಶುಕ್ರವಾರ 239.96 ಗಿಗಾವಾಟ್‌ಗೆ ಹೆಚ್ಚಳವಾಗಿದೆ.

ದೇಶದ ಬಹುತೇಕ ಭಾಗದಲ್ಲಿ ತಾಪಮಾನದ ತೀವ್ರ ಹೆಚ್ಚಳದಿಂದಾಗಿ ಹವಾ ನಿಯಂತ್ರಕ, ಕೂಲರ್ಸ್‌ಗಳ ಬಳಕೆಯಲ್ಲಿ ಏರಿಕೆಯಾಗಿದೆ. ಇದರಿಂದ ವಿದ್ಯುತ್‌ ಬೇಡಿಕೆ ಹೆಚ್ಚಳವಾಗಿದೆ. ಇದು ಈ ವರ್ಷದ ಬೇಸಿಗೆಯಲ್ಲಿ ಇದುವರೆಗಿನ ಗರಿಷ್ಠ ಬೇಡಿಕೆ ಎಂದು ವಿದ್ಯುತ್ ಸಚಿವಾಲಯದ ಅಂಕಿ–ಅಂಶಗಳು ತಿಳಿಸಿವೆ.

ಬುಧವಾರ 235.06 ಗಿಗಾವಾಟ್‌ ಮತ್ತು ಗುರುವಾರ 236.59 ಗಿಗಾವಾಟ್‌ ವಿದ್ಯುತ್‌ ಬೇಡಿಕೆ ಇತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿದ್ಯುತ್‌ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ 243.27 ಗಿಗಾವಾಟ್‌ ದಾಖಲಾಗಿತ್ತು. 

ವಿದ್ಯುತ್‌ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ವಿದ್ಯುತ್‌ ಬೇಡಿಕೆಯು ಮೇ ನಲ್ಲಿ ಹಗಲಿನ ವೇಳೆ 235 ಗಿಗಾವಾಟ್‌, ಸಂಜೆ ವೇಳೆ 225 ಗಿಗಾವಾಟ್‌ ಇರಲಿದೆ. ಜೂನ್‌ನಲ್ಲಿ ಹಗಲು 240 ಗಿಗಾವಾಟ್‌ ಮತ್ತು ಸಂಜೆ 235 ಗಿಗಾವಾಟ್‌ನಷ್ಟು ಇರಲಿದೆ. ಇದಲ್ಲದೇ ಈ ಬೇಸಿಗೆ ಅವಧಿಯಲ್ಲಿ ಬೇಡಿಕೆಯು 260 ಗಿಗಾವಾಟ್‌ನ್ನು ಮುಟ್ಟಲಿದೆ ಎಂದು ಅಂದಾಜಿಸಿದೆ.

ಮಾರ್ಚ್‌ನಲ್ಲಿ, ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಬೇಸಿಗೆಯು ಹೆಚ್ಚಿನ ಉಷ್ಣಾಂಶದಿಂದ ಕೂಡಿರಲಿದೆ ಮತ್ತು ಎಲ್‌ ನಿನೊ ಕನಿಷ್ಠ ಮೇ ವರೆಗೆ ಮುಂದುವರಿಯುತ್ತದೆ ಎಂದು ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT