ಚೆನ್ನೈ ಘಟಕದಲ್ಲಿ ಆ್ಯಪಲ್ ಐಫೋನ್ 14 ಉತ್ಪಾದನೆ
iPhone 14: ಚೆನ್ನೈ ಘಟಕದಲ್ಲಿ ಐಫೋನ್ ಉತ್ಪಾದಿಸಲಿದೆ ಪೆಗಟ್ರಾನ್

ಬೆಂಗಳೂರು: ಆ್ಯಪಲ್ ಐಫೋನ್ನ ತಯಾರಿಕೆಯ ಒಪ್ಪಂದ ಮಾಡಿಕೊಂಡಿರುವ ಪೆಗಟ್ರಾನ್ ಸಂಸ್ಥೆ, ಚೆನ್ನೈ ಘಟಕದಲ್ಲಿ ನೂತನ ಐಫೋನ್ 14 ಉತ್ಪಾದಿಸಲಿದೆ.
ಈಗಾಗಲೇ ವಿಸ್ಟ್ರಾನ್ ಮತ್ತು ಫಾಕ್ಸ್ಕಾನ್ ಘಟಕಗಳಲ್ಲಿ ಆ್ಯಪಲ್ ಐಫೋನ್ ಮತ್ತು ಇತರ ಉಪಕರಣಗಳನ್ನು ತಯಾರಿಸಲಾಗುತ್ತಿದೆ.
ಪೆಗಟ್ರಾನ್ ಮೂರನೇ ಸಂಸ್ಥೆಯಾಗಿದ್ದು, ಹೊಸದಾಗಿ ಬಿಡುಗಡೆಯಾದ ಐಫೋನ್ 14 ಅನ್ನು ಚೆನ್ನೈನಲ್ಲಿ ನಿರ್ಮಿಸಲಾದ ನೂತನ ಘಟಕದಲ್ಲಿ ತಯಾರಿಸುವುದಾಗಿ ಹೇಳಿದೆ.
ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪೆಗಟ್ರಾನ್, ಚೆನ್ನೈ ಹೊರವಲಯದಲ್ಲಿ ₹1,100 ಕೋಟಿ ವೆಚ್ಚದಲ್ಲಿ ಹೊಸ ಫ್ಯಾಕ್ಟರಿ ಸ್ಥಾಪಿಸಿದೆ.
ಸೆಪ್ಟೆಂಬರ್ 30ರಿಂದ ಹೊಸ ಘಟಕ ಕಾರ್ಯಾರಂಭ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.