ಮಂಗಳವಾರ, ಅಕ್ಟೋಬರ್ 26, 2021
20 °C

ಪೈಸೆ-ಪೈಸೆ ಲೆಕ್ಕದಲ್ಲಿ ಏರುತ್ತಲೇ ಇದೆ ಪೆಟ್ರೋಲ್‌, ಡೀಸೆಲ್‌ ದರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸುತ್ತಲೇ ಇವೆ. ಗುರುವಾರ ಪೆಟ್ರೋಲ್‌ ದರವನ್ನು ಲೀಟರಿಗೆ 30 ಪೈಸೆ ಮತ್ತು ಡಿಸೆಲ್‌ ದರ ಲೀಟರಿಗೆ 35 ಪೈಸೆಗಳಷ್ಟು ಏರಿಕೆ ಮಾಡಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಗೆ ಅನುಗುಣವಾಗಿ ಕಂಪನಿಗಳು ದೇಶದಲ್ಲಿ ಇಂಧನ ದರ ಹೆಚ್ಚಿಸುತ್ತಿವೆ. ಗುರುವಾರದ ದರ ಏರಿಕೆಯಿಂದಾಗಿ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರಗಳು ಗರಿಷ್ಠ ಮಟ್ಟ ತಲುಪಿವೆ. ಗುರುವಾರದ ದರ ಏರಿಕೆಯಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹ 106.77 ಮತ್ತು ಡೀಸೆಲ್‌ ದರ ₹ 97.32ಕ್ಕೆ ತಲುಪಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹ 103.24 ಮತ್ತು ಡೀಸೆಲ್‌ ದರ ₹ 91.42ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 109.25 ಮತ್ತು ಡೀಸೆಲ್‌ ದರ ₹ 99.55ಕ್ಕೆ ಏರಿಕೆ ಆಗಿದೆ. ಸೆಪ್ಟೆಂಬರ್ 28ರಿಂದ ಇಲ್ಲಿಯವರೆಗೆ ಪೆಟ್ರೋಲ್‌ ದರವು ಲೀಟರಿಗೆ ₹ 3.15ರಷ್ಟು ಏರಿಕೆ ಆಗಿದ್ದರೆ, ಡೀಸೆಲ್‌ ದರವು ಸೆಪ್ಟೆಂಬರ್ 24ರಿಂದ ಇಲ್ಲಿಯವರೆಗೆ ಲೀಟರಿಗೆ ₹ 2.15ರಷ್ಟು ಹೆಚ್ಚಾಗಿದೆ.

ಡೆಹರಾಡೂನ್‌, ಚಂಡೀಗಢ, ಗುವಾಹತಿ ಮತ್ತು ರಾಂಚಿಯಲ್ಲಿ ಮಾತ್ರವೇ ಪೆಟ್ರೋಲ್‌ ದರವು ಲೀಟರಿಗೆ ಸದ್ಯ ₹ 100ಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಡೀಸೆಲ್‌ ದರವು ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ನಗರಗಳಲ್ಲಿ ಈಗಾಗಲೇ ₹ 100ರ ಗಡಿ ದಾಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು