ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಪೆಟ್ರೋಲ್‌ ದರ: ಬೆಂಗಳೂರಲ್ಲಿ 6 ತಿಂಗಳಲ್ಲಿ ₹18.29 ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಕೊರೊನಾ ವೈರಸ್‌ ಹರಡುವಿಕೆ ತಡೆಗೆ ಹೇರಲಾದ ಲಾಕ್‌ಡೌನ್‌ ಮತ್ತು ಕಠಿಣಕ್ರಮಗಳು ಬಹುತೇಕ ತೆರವುಗೊಂಡ ಬಳಿಕ ಪೆಟ್ರೋಲ್‌ ದರ ಮತ್ತಷ್ಟು ಏರಿಕೆ ಕಂಡುಬಂದಿದೆ. ಬೆಂಗಳೂರಲ್ಲಿ ಪೆಟ್ರೋಲ್‌ ದರ ಎರಡು ತಿಂಗಳಲ್ಲಿ ₹7 ಹೆಚ್ಚಾಗಿದೆ.

ಬೆಂಗಳೂರಲ್ಲಿ ಪೆಟ್ರೋಲ್‌ ದರ ಒಂದು ಲೀಟರ್‌ಗೆ ₹105.31 ಇದೆ. ಕಳೆದ 20 ದಿನಗಳಿಂದ ದರದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಜೂನ್‌ 10ರಂದು ಪೆಟ್ರೋಲ್‌ ದರ ₹98.81 ಇತ್ತು. ಏಪ್ರಿಲ್‌ 10ರಂದು ₹93.57 ಇತ್ತು. ಒಟ್ಟಾರೆ ಕೇವಲ 6 ತಿಂಗಳಲ್ಲಿ ₹18.29 ಹೆಚ್ಚಾಗಿದೆ.

ಡೀಸೆಲ್‌ ದರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಒಂದು ಲೀಟರ್‌ ಡೀಸೆಲ್‌ ದರ ಬೆಂಗಳೂರಿನಲ್ಲಿ ₹95.32 ಇದೆ. ಜೂನ್‌ 10ರಂದು ₹91.73 ಇತ್ತು. ಏಪ್ರಿಲ್‌ 10ರಂದು ₹85.73 ಇತ್ತು. ಒಟ್ಟಾರೆ 6 ತಿಂಗಳಲ್ಲಿ ಡೀಸೆಲ್‌ ದರ ₹16.46 ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಒಂದಕ್ಕೆ ₹837.5 ಇದೆ. ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ₹90.50 ಹೆಚ್ಚಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ದರ ₹101.9 ಇದೆ. ಡೀಸೆಲ್‌ ದರ ₹89.93 ಇದ್ದರೆ, ಅಡುಗೆ ಅನಿಲ ದರ ₹834.5 ಇದೆ ಎಂದು ಮೈ ಪೆಟ್ರೋಲ್ ಪ್ರೈಸ್ ವೆಬ್ ಸೈಟ್ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು