ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,000 ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದ ‘ಫಿಲಿಪ್ಸ್’

Last Updated 30 ಜನವರಿ 2023, 8:44 IST
ಅಕ್ಷರ ಗಾತ್ರ

ಆಮ್‌ಸ್ಟರ್‌ಡಾಮ್‌: ಡಚ್ ಆರೋಗ್ಯ ತಂತ್ರಜ್ಞಾನ ಸಂಸ್ಥೆ ‘ಫಿಲಿಪ್ಸ್’ 6,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಸೋಮವಾರ ಘೋಷಿಸಿದೆ. ತನ್ನ ಲಾಭದಾಯಕತೆಯನ್ನು ಮರಳಿ ಸಾಧಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.

ಅರ್ಧದಷ್ಟು ಉದ್ಯೋಗ ಕಡಿತವನ್ನು ಈ ವರ್ಷ ಮಾಡಲಾಗುವುದು. ಉಳಿದ ಅರ್ಧ ಉದ್ಯೋಗಿಗಳನ್ನು 2025ರ ವೇಳೆಗೆ ಕೆಲಸದಿಂದ ತೆಗೆಯಲಾಗುವುದು ಎಂದು ಕಂಪನಿ ಹೇಳಿದೆ.

‘ಸ್ಲೀಪ್‌ಆಪ್ನಿಯಾ’ ಎನ್ನಲಾಗುವ ನಿದ್ರೆಗೆ ಸಂಬಂಧಿಸಿದ ತೊಂದರೆಗೆ ಪರಿಹಾರವಾಗಿ ಫಿಲಿಪ್ಸ್‌ ಇತ್ತೀಚೆಗೆ ವೆಂಟಿಲೇಟರ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿತ್ತು. ಅದರಲ್ಲಿ ಬಳಸಲಾಗುವ ಫೋಮ್‌ (ನೊರೆಯಂಥ ವಸ್ತು) ವಿಷಕಾರಿ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಲಕ್ಷಾಂತರ ವೆಂಟಿಲೇಟರ್‌ಗಳನ್ನು ಹಿಂದಕ್ಕೆ ಪಡೆದಿದೆ. ಇದರ ನಷ್ಟವನ್ನು ತುಂಬಿಕೊಳ್ಳಲು ಸಂಸ್ಥೆಯ ಉದ್ಯೋಗಿಗಳ ಪ್ರಮಾಣವನ್ನು ಶೇ. 5ರಷ್ಟು ಕಡಿತ ಮಾಡುವ ಅಥವಾ 4,000 ಮಂದಿಯನ್ನು ಕೆಲಸದಿಂದ ತೆಗೆಯುವ ನಿರ್ಧಾರವನ್ನು ಕಳೆದ ಅಕ್ಟೋಬರ್‌ನಲ್ಲಿ ಕೈಗೊಂಡಿತ್ತು.

'ಕಾರ್ಯಾಚರಣೆಗೆ ಸಂಬಂಧಿಸಿದಂತೆ ಫಿಲಿಪ್ಸ್ ಹಲವಾರು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಈ ಕಾರಣದಿಂದ ಪ್ರಬಲ ಮಾರುಕಟ್ಟೆಯ ಸಂಪೂರ್ಣ ಲಾಭ ಮಾಡಿಕೊಳ್ಳಲು ಕಂಪನಿಗೆ ಸಾಧ್ಯವಾಗುತ್ತಿಲ್ಲ’ ಎಂದು ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಯ್ ಜಾಕೋಬ್ಸ್ ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT