ನವದೆಹಲಿ: ಬಂಡವಾಳ ಮೂಲ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾರ್ಚ್ ತ್ರೈಮಾಸಿಕದಲ್ಲಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 3,200 ಕೋಟಿ ಸಂಗ್ರಹಿಸುವುದಾಗಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶನಿವಾರ ಹೇಳಿದೆ.

ಡಿಸೆಂಬರ್‌ನಲ್ಲಿ ಅರ್ಹ ಸಾಂಸ್ಥಿಕ ವಿತರಣೆಯ (ಕ್ಯುಐಪಿ) ಮೂಲಕ ₹ 3,788 ಕೋಟಿ ಬಂಡವಾಳ ಸಂಗ್ರಹಿಸಿದೆ. ಇದರ ನಂತರ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರವು ಹೊಂದಿರುವ ಪಾಲು ಶೇ 85.59ರಿಂದ ಶೇ 76.87ಕ್ಕೆ ಇಳಿಕೆಯಾಗಿದೆ.

ಷೇರುಗಳು ಮತ್ತು ಸಾಲಪತ್ರಗಳ ಮಾರಾಟದ ಮೂಲಕ ಒಟ್ಟಾರೆ ₹ 14 ಸಾವಿರ ಕೋಟಿ ಸಂಗ್ರಹಿಸಲು ಒಪ್ಪಿಗೆ ದೊರೆತಿದೆ. ಯೋಜನೆಯಂತೆ ಎಟಿ–1 ಬಾಂಡ್‌ಗಳನ್ನು ಮಾರಾಟ ಮಾಡುವ ಮೂಲಕ ₹ 3 ಸಾವಿರ ಕೋಟಿ, ಟೈಯರ್ 2 ಬಾಂಡ್‌ಗಳ ಮೂಲಕ ₹ 4 ಸಾವಿರ ಕೋಟಿ ಹಾಗೂ ಕ್ಯುಐಪಿ ಮೂಲಕ ₹ 7 ಸಾವಿರ ಕೋಟಿ ಸಂಗ್ರಹಿಸಲು ನಿರ್ಧರಿಸಿದೆ.

‘ಟಯರ್ 2 ಬಾಂಡ್‌ಗಳ ಮೂಲಕ ₹ 4 ಸಾವಿರ ಕೋಟಿ ಹಾಗೂ ಕ್ಯುಐಪಿ ಮೂಲಕ ₹ 3,788 ಕೋಟಿಯನ್ನು ಡಿಸೆಂಬರ್‌ನಲ್ಲಿ ಸಂಗ್ರಹಿಸಲಾಗಿದೆ. ಜನವರಿಯಲ್ಲಿ ಎಟಿ–1 ಬಾಂಡ್‌ಗಳ ಮೂಲಕ ₹ 500 ಕೋಟಿ ಸಂಗ್ರಹವಾಗಿದೆ. ಹೀಗಾಗಿ ಉಳಿದ ₹ 2,500 ಕೋಟಿಯನ್ನು ಮಾರ್ಚ್ 31ರ ಒಳಗಾಗಿ ಹೆಚ್ಚುವರಿ ಟೈರ್ 1 ಬಾಂಡ್‌ಗಳ ಅಡಿಯಲ್ಲಿ ಸಂಗ್ರಹಿಸುವ ವಿಶ್ವಾಸವಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭ ₹ 506 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 492 ಕೋಟಿ ನಷ್ಟ ಅನುಭವಿಸಿತ್ತು. ಒಟ್ಟಾರೆ ವರಮಾನ ₹ 15,967 ಕೋಟಿಗಳಿಂದ ₹ 23,298 ಕೋಟಿಗಳಿಗೆ ಏರಿಕೆಯಾಗಿದೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ವಾರ್ಷಿಕ ಲಾಭ ₹ 2 ಸಾವಿರ ಕೋಟಿಗಳಷ್ಟಾಗುವ ನಿರೀಕ್ಷೆ ಇದೆ’ ಎಂದು ರಾವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.