ಬೆಂಗಳೂರು: ಅವಧಿ ವಿಮೆಯನ್ನು ಎಷ್ಟು ಜನ ಖರೀದಿಸಿದ್ದಾರೆ ಎಂಬ ಬಗ್ಗೆ ತನ್ನ ಆ್ಯಪ್ ಮೂಲಕ ಸಮೀಕ್ಷೆ ನಡೆಸಿರುವ ಪಾಲಿಸಿ ಬಜಾರ್ ಜಾಲತಾಣವು, ‘ದೇಶದಾದ್ಯಂತ ಶೇಕಡ 44ರಷ್ಟು ಮಂದಿ ಗ್ರಾಹಕರು ಈ ವಿಮೆ ಸೌಲಭ್ಯ ಪಡೆದುಕೊಂಡಿದ್ದಾರೆ’ ಎಂದು ಹೇಳಿದೆ. ಆನ್ಲೈನ್ ಮೂಲಕ ವಿಮೆಯನ್ನು ಮಾರಾಟ ಮಾಡುವ ವಹಿವಾಟಿನಲ್ಲಿ ಪಾಲಿಸಿ ಬಜಾರ್ ತೊಡಗಿಸಿಕೊಂಡಿದೆ.

ಒಟ್ಟು 22,726 ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರ್ 10ರಿಂದ 25ರ ನಡುವೆ ಈ ಸಮೀಕ್ಷೆ ನಡೆದಿದೆ. ಅವಧಿ ವಿಮೆ ಖರೀದಿಸಿದವರಲ್ಲಿ ಶೇಕಡ 50ಕ್ಕಿಂತ ಹೆಚ್ಚಿನವರು ₹ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಿಮೆಯನ್ನು ಖರೀದಿಸಿದ್ದಾರೆ ಎಂದು ಪಾಲಿಸಿ ಬಜಾರ್ ಹೇಳಿದೆ. ‘ಅವಧಿ ವಿಮೆ ಪಾಲಿಸಿಗಳನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಪಾಲಿಸಿ ಬಜಾರ್ ಸಿಇಒ ಸರ್ಬ್ವೀರ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.