ಮಂಗಳವಾರ, ಸೆಪ್ಟೆಂಬರ್ 28, 2021
26 °C

ತೆರಿಗೆ ಉಳಿಸಲು ಮಾರ್ಗ ತಿಳಿಸಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾನು 2001ರಲ್ಲಿ  ₹ 2 ಲಕ್ಷ ಕೊಟ್ಟು ನಿವೇಶನ ಕೊಂಡಿದ್ದೆ. ಈಗ ಅದನ್ನು 50 ಲಕ್ಷಕ್ಕೆ ಮಾರಾಟ ಮಾಡಬೇಕೆಂದಿದ್ದೇನೆ. ನನ್ನ ವಾರ್ಷಿಕ ಆದಾಯ ₹ 3 ಲಕ್ಷ. Capital Gain Tax ಎಷ್ಟು ಬರಬಹುದು ಹಾಗೂ ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿರಿ.

ಬಾಬು, ಬೆಂಗಳೂರು

ಉತ್ತರ: ನೀವು ನಿವೇಶನ ಮಾರಾಟ ಮಾಡಿ ಬಂದಿರುವ ಲಾಭದಲ್ಲಿ, ನಿವೇಶನ ಕೊಳ್ಳಲು ಕೊಟ್ಟ ಹಣ ಹಾಗೂ Cost of Infation index ಲೆಕ್ಕ ಹಾಕಿ ಬರುವ ಮೊತ್ತ ಕಳೆದು ಉಳಿದ ಹಣಕ್ಕೆ Capital Gain Tax ಕೊಡಬೇಕಾಗುತ್ತದೆ. 2001–02ರಲ್ಲಿ C.I.I. 100 ಇದ್ದು ಈಗ ಅದು 272 ಆಗಿರುತ್ತದೆ. ಇದೇ ವೇಳೆ ನೀವು ನ್ಯಾಷನಲ್ ಹೈವೇ ಆಥಾರಿಟಿ ಆಫ್ ಇಂಡಿಯಾ ಅಥವಾ ರೂರಲ್ ಇಲೆಕ್ಟ್ರಿಫಿಕೇಷನ್ ಕಾರ್ಪೋರೇಷನ್‌ನಲ್ಲಿ ₹ 50 ಲಕ್ಷ ತೊಡಗಿಸಿ ತೆರಿಗೆ ಉಳಿಸಬಹುದು. ನಿಮ್ಮ ವೈಯಕ್ತಿಕ ಆದಾಯಕ್ಕೂ ನಿವೇಶನ ಮಾರಾಟ ಮಾಡಿ ಬಂದ ಆದಾಯಕ್ಕೂ ಬೇರೆ ಬೇರೆ ಲೆಕ್ಕ ಹಾಕಬೇಕಾಗುತ್ತದೆ.

***
ನಾನು ಕೇಂದ್ರ ಸರ್ಕಾರದ ನೌಕರ. ವಯಸ್ಸು 32. ತಿಂಗಳ ಸಂಬಳ ₹ 46,000.  ಮ್ಯೂಚುವಲ್ ಫಂಡ್‌ನ SIP ನಲ್ಲಿ ₹ 5,500 ಹಾಕುತ್ತಿದ್ದೇನೆ. ಚಿಟ್‌ಫಂಡ್‌ನಲ್ಲಿ ₹ 10,000, LIC ವಾರ್ಷಿಕ ₹ 10,000, ಮನೆ ಖರ್ಚು ₹ 14,000. ನನ್ನೊಡನೆ ಹೆಂಡತಿ, ಸಣ್ಣಮಗ, ತಂದೆತಾಯಿ ಇದ್ದಾರೆ. ಭವಿಷ್ಯಕ್ಕೆ ಮಾರ್ಗದರ್ಶನ ಮಾಡಿರಿ.

ಸಂತೋಷ್.ಜಿ.ಎ., ಬೆಂಗಳೂರು

ಉತ್ತರ: ನೀವು ಹಣ ಹೂಡುತ್ತಿರುವ SIP ಚೆನ್ನಾಗಿ ವರಮಾನ ತರುತ್ತಿದ್ದರೆ ಅದನ್ನು ಮುಂದುವರೆಸಿರಿ. ನಷ್ಟ ಅನುಭವಿಸುತ್ತಿದ್ದಲ್ಲಿ ಅದೇ ಮಾದರಿ ಬ್ಯಾಂಕ್ ಆರ್.ಡಿ. ಮಾಡಿರಿ. ನೀವು ನಿಮ್ಮ ಕುಟುಂಬದ ಸಲುವಾಗಿ, 5 ಜನರಿಗೂ ಸೇರಿ, ಸಿಂಡ್ ಆರೋಗ್ಯದ ಸಿಂಡಿಕೇಟ್ ಬ್ಯಾಂಕಿನ ಆರೋಗ್ಯ ವಿಮೆ ₹ 5 ಲಕ್ಷಕ್ಕೆ ಮಾಡಿರಿ. ಇದರಿಂದ ಇಡೀ ಕುಟುಂಬಕ್ಕೆ ಆರೋಗ್ಯ ರಕ್ಷಣೆ ಸಿಕ್ಕಿದಂತಾಗುತ್ತದೆ. ಚಿಟ್‌ಫಂಡ್ MSIL ನಂತಹ ಕಂಪನಿಗಳಲ್ಲಿ ಮಾತ್ರ ಮಾಡಿರಿ.

ನಿಮ್ಮ ಚಿಕ್ಕ ಮಗನ ಸಲುವಾಗಿ ಹೊಸ ಚಿಲ್ಡ್ರನ್ಸ್ ಮನಿ ಬ್ಯಾಕ್ ಪಾಲಿಸಿ ಮಾಡಿಸಿ ವಾರ್ಷಿಕ ₹ 10,000 ತುಂಬಿರಿ. ಮಗುವಿಗೆ 18, 20, 22 ವರ್ಷ ಆಗುವಾಗ ಕ್ರಮವಾಗಿ ವಿಮಾ ಮೊತ್ತದ ಶೇ 20 ಈ ವರ್ಷಗಳಲ್ಲಿ ದೊರೆಯುತ್ತದೆ. ಉಳಿದ ಶೇ 40 ಪಾಲಿಸಿ ಪರಿಪಕ್ವವಾಗುವಾಗ ದೊರೆಯುತ್ತದೆ. ಉಳಿತಾಯದಲ್ಲಿ ಸುರಕ್ಷತೆ ಹಾಗೂ ನಿಶ್ಚಿತ ವರಮಾನ ಬಹುಮುಖ್ಯ.

SIP ಸರಿಯಾಗಿ ನಡೆದರೆ ಒಳ್ಳೆ ವರಮಾನ ಬರಬಹುದು. ಆದರೆ ಈ ಮಾರ್ಗ ಷೇರು ಮಾರುಕಟ್ಟೆ ಅವಲಂಬಿತವಾಗಿರುವುದರಿಂದ, ಪ್ರತೀ ವರ್ಷ ನೋಡಿ ಮುಂದುವರಿಸುವುದು ಉತ್ತಮ. ತೆರಿಗೆ ಉಳಿಸುವ ಹಾಗೂ ದೀರ್ಘಾವಧಿ ಹೂಡಿಕೆ ದೃಷ್ಟಿಯಿಂದ ಪಿ.ಪಿ.ಎಫ್. ಖಾತೆ ಪ್ರಾರಂಭಿಸಿ, ವಾರ್ಷಿಕವಾಗಿ ಎಷ್ಟಾದರಷ್ಟು ತುಂಬುತ್ತಾ ಬನ್ನಿ. ನಿಮಗೆ ಶುಭ ಹಾರೈಸುತ್ತೇನೆ.

***

ಐಸಿಐಸಿಐ, ಟಾಟಾ ಲೈಫ್‌ ವಿಮಾ ಕಂಪನಿಗಳಲ್ಲಿ ವಿಮೆ ಇಳಿಸಬಹುದೇ. ಮುಂದೆ ಈ ಕಂಪನಿಗಳು ಒಂದಾಗುವ ಸಂಭವವಿದೆಯೇ ತಿಳಿಸಿ.

ಪವನ್‌ ಕೆ. ಬೆಂಗಳೂರು

ಉತ್ತರ: ನನಗೆ ತಿಳಿದಂತೆ ICICI, TATA LIFE ಎರಡೂ ಸದೃಢವಾದ ಜೀವ ವಿಮಾ ಕಂಪನಿಗಳು. ಇಲ್ಲಿ ವಿಮೆ ಮಾಡಿಸುವುದರಿಂದ ಏನೂ ತೊಂದರೆ ಆಗಲಿಕ್ಕಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಮುಂದೆ ಏನಾಗಬಹುದು ಎನ್ನುವುದನ್ನು ಯಾವುದೇ ಪರಿಣತರಿಗೂ ಹೇಳಲು ಸಾಧ್ಯವಿಲ್ಲ. ಖಾಸಗಿ ವಿಮಾ ಕಂಪನಿಗಳನ್ನು ಕೇಂದ್ರ ಸರ್ಕಾರ ಹಾಗೂ Insurance Regulation Act ನಿಯಂತ್ರಿಸುತ್ತವೆ. ಹೀಗಾಗಿ ವಿಮೆ ಸಂಸ್ಥೆಗಳ ಬಗ್ಗೆ ಆತಂಕ ಪಡಬೇಕಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.