ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 7 ಮೇ 2019, 14:21 IST
ಅಕ್ಷರ ಗಾತ್ರ

ಕೆ. ವಿಜಯ್, ಹುಬ್ಬಳ್ಳಿ

ನಾನು ರೈಲ್ವೆಯಲ್ಲಿ ಕೆಲಸ ಮಾಡುತ್ತೇನೆ. ವಯಸ್ಸು 34. ಒಟ್ಟು ಸಂಬಳ ₹ 50,000. SBIನಲ್ಲಿ ₹ 9 ಲಕ್ಷ ಗೃಹ ಸಾಲವಿದೆ. EMI
₹ 14,700. ಸ್ವಂತ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದೇನೆ. India Bullsನಲ್ಲಿ ₹ 20 ಲಕ್ಷ ಸಾಲ ಪಡೆದು, ಇನ್ನೊಂದು ಫ್ಲ್ಯಾಟ್ ಖರೀದಿಸಬೇಕೆಂದಿದ್ದೇನೆ. ಈಗ ಇರುವ ಎಲ್ಲಾ ಆಸ್ತಿ, ಬಂಗಾರ ಮಾರಾಟ ಮಾಡಿ, ಇರುವ ಸಾಲ ತೀರಿಸಿ India Bulls ಮಾತ್ರ ಇಟ್ಟುಕೊಳ್ಳಬೇಕೆಂದಿದ್ದೇನೆ. ನನ್ನ ಪ್ರಶ್ನೆ: ನಿವೇಶನ, ಫ್ಲ್ಯಾಟ್‌ ಮಾರಾಟ ಮಾಡಿ ಬರುವ ಹಣಕ್ಕೆ ತೆರಿಗೆ ಇದೆಯೇ. ಬಂಗಾರ ಮಾರಾಟ ಮಾಡಿ ಬಂದ ಲಾಭಕ್ಕೆ ತೆರಿಗೆ ಇದೆಯೇ. ಗೃಹಸಾಲದ ಮೇಲಿನ ತೆರಿಗೆ ವಿನಾಯ್ತಿ ಮುಂದುವರೆಯುವುದೇ?

ಉತ್ತರ: ನೀವು ಒಂದು ಆಸ್ತಿ ಮಾರಾಟ ಮಾಡಿ ಇನ್ನೊಂದು ಕೊಳ್ಳುವಾಗ ಮುಖ್ಯವಾಗಿ ಮನೆ / ಫ್ಲ್ಯಾಟ್ ಕೊಳ್ಳುವಾಗ Capital Gain Tax ಅನ್ವಯವಾಗುವುದಿಲ್ಲ. ಬಂಗಾರ ಮಾರಾಟ ಮಾಡಿ ಬರುವ ಲಾಭಕ್ಕೆ ತೆರಿಗೆ ಇದೆ. ಓರ್ವ ವ್ಯಕ್ತಿ ಗೃಹಸಾಲ ಪಡೆದು, ತೀರಿಸುವ ಮುನ್ನ, ಮತ್ತೊಂದು ಗೃಹಸಾಲ ಪಡೆದರೂ, ಆತನ ಒಟ್ಟು ಗೃಹಸಾಲದಿಂದ ಬರುವ ವಿನಾಯ್ತಿಯ ಗರಿಷ್ಠ ಮೊತ್ತದ ತನಕ ಸೆಕ್ಷನ್ 80C ಹಾಗೂ 24(B) ಲಾಭ ಪಡೆಯಬಹುದು. ನೀವು ಬಹಳಷ್ಟು ವ್ಯವಹಾರ ಮಾಡಿದ್ದು, ತೆರಿಗೆ ರಿಟರ್ನ್ ತುಂಬುವ ಮುನ್ನ ಚಾರ್ಟರ್ಡ್ ಅಕೌಂಟೆಂಟ್ ಸಂಪರ್ಕಿಸಬೇಕಾಗುತ್ತದೆ.

ಕೃಷ್ಣಮೂರ್ತಿ, ಊರುಬೇಡ

ನನ್ನ ವಯಸ್ಸು 65. ಸೊಸೈಟಿಯವರು ಕೊಡಿಸಿದ ನಿವೇಶನ ₹ 43 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಸಾಲ ತೀರಿಸಿ ₹ 40 ಲಕ್ಷ, ಕ್ರಮವಾಗಿ ₹ 20 ಲಕ್ಷ ನನ್ನ ಹೆಸರಿನಲ್ಲಿಯೂ, ₹ 20 ಲಕ್ಷ ನನ್ನ ಹೆಂಡತಿ ಹೆಸರಿನಲ್ಲಿಯೂ ಠೇವಣಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನನಗೆ Capital Gain Tax ಬರುತ್ತದೆಯೇ ?

ಉತ್ತರ: ಆದಾಯ ತೆರಿಗೆ, ಬಂಡವಾಳ ವೃದ್ಧಿ ತೆರಿಗೆ (Capital Gain Tax) ಇವೆರಡರಲ್ಲಿ ತುಂಬಾ ವ್ಯತ್ಯಾಸಗಳಿವೆ. ಆದಾಯಕ್ಕೆ ಅನುಗುಣವಾಗಿ ಅವರವರ ವಯಸ್ಸಿಗನುಗುಣವಾಗಿ, ಆದಾಯ ತೆರಿಗೆಯವರು ವಿಧಿಸುವ ತೆರಿಗೆ ಸಲ್ಲಿಸುವುದನ್ನು ಆದಾಯ ತೆರಿಗೆ ಎನ್ನುತ್ತಾರೆ. ಓರ್ವ ವ್ಯಕ್ತಿ ಯಾವುದೇ ಸ್ಥಿರ ಆಸ್ತಿ ಮಾರಾಟ ಮಾಡಿ ಬಂದಿರುವ ಲಾಭಕ್ಕೆ (ಕೃಷಿ ಜಮೀನು ಹೊರತುಪಡಿಸಿ) ಬಂಡವಾಳ ವೃದ್ಧಿ ತೆರಿಗೆ ಸಲ್ಲಿಸಬೇಕಾಗುತ್ತದೆ. ಈ ವಿಚಾರದಲ್ಲಿ ವ್ಯಕ್ತಿಯ ಉಳಿದ ಒಟ್ಟು ಆದಾಯಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.

ವಿಜಯಕುಮಾರ್, ಬೆಂಗಳೂರು

ವಯಸ್ಸು 42. ಖಾಸಗಿ ಕಂಪನಿಯಲ್ಲಿ ಕೆಲಸ ಹಾಗೂ 80C ಆಧಾರದ ಮೇಲೆ₹ 1.50 ಲಕ್ಷ ಉಳಿಸುತ್ತೇವೆ. ಆದರೂ ತುಂಬಾ ಆದಾಯ ತೆರಿಗೆ ಕೊಡುತ್ತಿದ್ದೇನೆ. ಕಂಪನಿ ವತಿಯಿಂದ ನಮಗೆ ಆರೋಗ್ಯ ವಿಮೆ ಇದೆ. ಇನ್ನೂ ಹೆಚ್ಚಿನ ಆರೋಗ್ಯ ವಿಮೆ ಮಾಡಿಸಲೇ ಅಥವಾ NPS ಮಾಡಿಸಲೇ. ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ.

ಉತ್ತರ: ತೆರಿಗೆ ಉಳಿಸಲು ನೀವು ಆರೋಗ್ಯ ವಿಮೆ ಮಾಡುವುದರಲ್ಲಿ ಅರ್ಥವಿಲ್ಲ. ಈಗಾಗಲೇ ಕಂಪನಿಯವರು ನಿಮಗೆ ಈ ಸೌಲತ್ತು ನೀಡಿದ್ದು, ಅದನ್ನೇ ಉಪಯೋಗಿಸಿ. ಸೆಕ್ಷನ್ 80CCD (1B) ಆಧಾರದ ಮೇಲೆ ಗರಿಷ್ಠ
₹ 50,000 ತನಕ ತೆರಿಗೆ NPSನಲ್ಲಿ ತೊಡಗಿಸುವ ಅವಕಾಶವಿದೆ. ಪಿಂಚಣಿ ಸೌಲತ್ತು ಇರದ ನಿಮಗೆ ಇದು ನಿಜವಾಗಿ ಉತ್ತಮ ಹೂಡಿಕೆ ಆಗಿರುತ್ತದೆ. ನಿಮಗೆ ಸ್ವಂತ ಮನೆ ಇಲ್ಲವಾದಲ್ಲಿ ಗೃಹಸಾಲ ಪಡೆದು, ಬಡ್ಡಿಯಲ್ಲಿ ತೆರಿಗೆ ಉಳಿಸುವ ಸೌಲತ್ತು ಪಡೆಯಬಹುದು. ಬರೀ ತೆರಿಗೆ ಉಳಿಸುವ ಮಾರ್ಗಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಡದೆ ನಿವೇಶನ ಕೊಳ್ಳಲು ಪ್ರಯತ್ನಿಸಿ. ಇಲ್ಲಿ ಹೂಡಿದ ಹಣ ಬಹುಬೇಗ ಬೆಳೆಯುತ್ತದೆ. ಸ್ಥಿರ ಆಸ್ತಿ ಹೂಡಿಕೆಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT