ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟ ಶೇ 28ರಷ್ಟು ಹೆಚ್ಚಳ

Last Updated 8 ಏಪ್ರಿಲ್ 2021, 13:38 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟವು 2020ರ ಮಾರ್ಚ್‌ಗೆ ಹೋಲಿಸಿದರೆ 2021ರ ಮಾರ್ಚ್‌ನಲ್ಲಿ ಶೇಕಡ 28.39ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಗುರುವಾರ ತಿಳಿಸಿದೆ.

2020ರ ಮಾರ್ಚ್‌ನಲ್ಲಿ 2.17 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿದ್ದವು. ಮಾರಾಟದ ಸಂಖ್ಯೆಯು 2021ರ ಮಾರ್ಚ್‌ನಲ್ಲಿ 2.79 ಲಕ್ಷಕ್ಕೆ ತಲುಪಿದೆ ಎಂದು ಎಫ್‌ಎಡಿಎ ಹೇಳಿದೆ.

ದ್ವಿಚಕ್ರ ವಾಹನಗಳ ಮಾರಾಟ ಶೇ 35.26ರಷ್ಟು ಇಳಿಕೆ ಆಗಿದೆ. ತ್ರಿಚಕ್ರ ವಾಹನಗಳ ಮಾರಾಟ ಶೇ 50.72ರಷ್ಟು, ವಾಣಿಜ್ಯ ವಾಹನಗಳ ಮಾರಾಟ ಶೇ 42ರಷ್ಟು ಇಳಿಕೆ ಕಂಡಿದೆ. ಆದರೆ, ಟ್ರ್ಯಾಕ್ಟರ್‌ ಮಾರಾಟವು ಶೇ 29.21ರಷ್ಟು ಹೆಚ್ಚಾಗಿದೆ. ಒಟ್ಟಾರೆ, ಎಲ್ಲ ಬಗೆಯ ವಾಹನಗಳ ಮಾರಾಟದಲ್ಲಿ ಶೇ 28.64ರಷ್ಟು ಇಳಿಕೆ ಕಂಡುಬಂದಿದೆ.

ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮಾರಾಟದ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ಯಾವುದೇ ತರಹದ ಲಾಕ್‌ಡೌನ್‌ ಜಾರಿಯಾದರೂ ವಾಹನ ಉದ್ಯಮದ ಮೇಲೆ ಅಡ್ಡ ಪರಿಣಾಮ ಉಂಟಾಗಲಿದೆ. ಸೆಮಿಕಂಡಕ್ಟರ್ ಮತ್ತು ಎಬಿಎಸ್‌ ಕೊರತೆಯು ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗಿವೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT