ಮುಂಬೈ: ದ್ವಿಪಕ್ಷೀಯ ವಹಿವಾಟಿಗೆ ಸ್ಥಳೀಯ ಕರೆನ್ಸಿ ಬಳಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಬ್ಯಾಂಕ್ ಆಫ್ ಮಾರಿಷಸ್ (ಬಿಒಎಂ) ಒಪ್ಪಂದಕ್ಕೆ ಅಂಕಿತ ಹಾಕಿವೆ.

ಇದರನ್ವಯ ಉಭಯ ರಾಷ್ಟ್ರಗಳು ಗಡಿಯಾಚೆಗಿನ ವ್ಯಾಪಾರಕ್ಕೆ ಸ್ಥಳೀಯ ಕರೆನ್ಸಿ ಬಳಸಬಹುದಾಗಿದೆ. ಈ ಕುರಿತ ತಿಳಿವಳಿಕೆ ಪತ್ರಕ್ಕೆ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮತ್ತು ಬಿಒಎಂ ಗವರ್ನರ್ ರಾಮಕೃಷ್ಣ ಸಿಥಾನೆನ್ ಜಿ.ಸಿ.ಎಸ್.ಕೆ ಸಹಿ ಹಾಕಿದ್ದಾರೆ.

ಪೋರ್ಟ್ ಲೂಯಿಸ್ನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ನ ಪ್ರಧಾನಿ ಅವರ ಸಮಕ್ಷಮದಲ್ಲಿ ಈ ತಿಳಿವಳಿಕೆ ಪತ್ರವನ್ನು ಇತ್ತೀಚೆಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರ್ಬಿಐ ಮಂಗಳವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.