ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಹಾನಿ: ಹೋಟೆಲ್, ಪ್ರವಾಸೋದ್ಯಮ ವಲಯಗಳಿಗೆ ಸುಲಭ ಸಾಲ -ಆರ್‌ಬಿಐ

Last Updated 4 ಜೂನ್ 2021, 14:29 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್ ಸಾಂಕ್ರಾಮಿಕದಿಂದಾಗಿ ತೀವ್ರ ಹಾನಿಗೆ ಒಳಗಾಗಿರುವ ಉದ್ಯಮದ ಕೆಲವು ವಲಯಗಳಿಗೆ ಸಾಲ ನೀಡಲು ನೆರವಾಗುವ ಉದ್ದೇಶದಿಂದ ಆರ್‌ಬಿಐ, ₹ 15 ಸಾವಿರ ಕೋಟಿ ಮೌಲ್ಯದ ವಿಶೇಷ ಯೋಜನೆಯೊಂದನ್ನು ರೂಪಿಸಲು ತೀರ್ಮಾನಿಸಿದೆ.

‘ಕೋವಿಡ್‌ನ ಎರಡನೆಯ ಅಲೆಯ ದುಷ್ಪರಿಣಾಮಗಳನ್ನು ತಗ್ಗಿಸುವ ಉದ್ದೇಶದಿಂದ 2022ರ ಮಾರ್ಚ್‌ 31ರವರೆಗೆ ಕೆಲವು ವಲಯಗಳಿಗೆ ಸಾಲ ಒದಗಿಸಲು ವಿಶೇಷ ವ್ಯವಸ್ಥೆಯೊಂದನ್ನು ಮಾಡಲಾಗುತ್ತದೆ. ಇದರ ಅಡಿ ಗರಿಷ್ಠ ಮೂರು ವರ್ಷಗಳ ಅವಧಿಗೆ ಸಾಲ ಪಡೆಯಬಹುದು’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ತಿಳಿಸಿದರು.

ಈ ಯೋಜನೆಯ ಅಡಿಯಲ್ಲಿ, ಹೋಟೆಲ್ ಮತ್ತು ರೆಸ್ಟಾರೆಂಟ್‌, ಪ್ರವಾಸೋದ್ಯಮ ವಲಯ, ಪ್ರವಾಸ ಸೌಲಭ್ಯ ಕಲ್ಪಿಸುವ ಏಜೆಂಟ್‌ಗಳು, ಪಾರಂಪರಿಕ ಪ್ರವಾಸಿ ತಾಣಗಳು, ವಿಮಾನಗಳಿಗೆ ಬಿಡಿಭಾಗ ಪೂರೈಸುವ ಉದ್ಯಮಗಳು, ಖಾಸಗಿ ಬಸ್ ಸೇವೆ ಒದಗಿಸುವವರು, ಕಾರು ರಿಪೇರಿ ಸೇವೆ ಒದಗಿಸುವವರು, ಕಾರುಗಳನ್ನು ಬಾಡಿಗೆ ಆಧಾರದಲ್ಲಿ ನೀಡುವವರು, ಸ್ಪಾ ಕ್ಲಿನಿಕ್‌ಗಳು, ಬ್ಯೂಟಿ ಪಾರ್ಲರ್‌ ಹಾಗೂ ಸಲೂನ್‌ಗಳಿಗೆ ಬ್ಯಾಂಕ್‌ಗಳು ಸಾಲ ಒದಗಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT