ಗುರುವಾರ , ನವೆಂಬರ್ 26, 2020
20 °C

ಧನಲಕ್ಷ್ಮಿ ಬ್ಯಾಂಕ್‌ಗೆ ನಿರ್ದೇಶಕರನ್ನು ನೇಮಿಸಿದ ಆರ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಖಾಸಗಿ ವಲಯದ ಧನಲಕ್ಷ್ಮಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಹೆಚ್ಚುವರಿ ನಿರ್ದೇಶಕರ
ನ್ನಾಗಿ ಡಿ.ಕೆ. ಕಶ್ಯಪ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎರಡು ವರ್ಷಗಳ ಅವಧಿಗೆ ನೇಮಕ ಮಾಡಿದೆ. ಆದರೆ, ಯಾವ ಕಾರಣಕ್ಕಾಗಿ ಅವರನ್ನು ಆರ್‌ಬಿಐ ನೇಮಕ ಮಾಡಿದೆ ಎಂಬುದನ್ನು ಧನಲಕ್ಷ್ಮಿ ಬ್ಯಾಂಕ್ ತಿಳಿಸಿಲ್ಲ.

ಕಶ್ಯಪ್ ಅವರು ಆರ್‌ಬಿಐನ ಬೆಂಗಳೂರು ಪ್ರಾದೇಶಿಕ ಕಚೇರಿಯ ಮಹಾ ಪ್ರಬಂಧಕ. ಆರ್‌ಬಿಐ ಸಾಮಾನ್ಯ ಸಂದರ್ಭಗಳಲ್ಲಿ ಖಾಸಗಿ ಬ್ಯಾಂಕುಗಳ ಆಡಳಿತ ಮಂಡಳಿಗೆ ತನ್ನ ಕಡೆಯಿಂದ ನಿರ್ದೇಶಕರನ್ನು ನೇಮಕ ಮಾಡುವುದಿಲ್ಲ. ಧನಲಕ್ಷ್ಮಿ ಬ್ಯಾಂಕ್‌ನಲ್ಲಿನ ಕೆಲವು ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಬ್ಯಾಂಕ್‌ ನೌಕರರ ಒಕ್ಕೂಟಗಳು, ಆರ್‌ಬಿಐ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು