ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RBI Policy: ಮೂರನೇ ಬಾರಿಗೆ ರೆಪೊ ದರ ಹೆಚ್ಚಿಸಿದ ಆರ್‌ಬಿಐ: ಶೇ 0.50 ಹೆಚ್ಚಳ

Last Updated 5 ಆಗಸ್ಟ್ 2022, 7:20 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರೊಂದಿಗೆ ರೆಪೊ ದರ ಈಗ ಶೇ 5.4 ಆಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮುಂಬೈಯಲ್ಲಿ ಶುಕ್ರವಾರ ಹಣಕಾಸು ನೀತಿ ಪ್ರಕಟಿಸಿ ರೆಪೊ ದರ ಹೆಚ್ಚಳ ಮಾಡಿರುವುದನ್ನು ಘೋಷಿಸಿದರು. ರೆಪೊ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ರೆಪೊ ದರ ಹೆಚ್ಚಳ ನಿರ್ಧಾರಕ್ಕೆ ಶಕ್ತಿಕಾಂತ ದಾಸ್ ಸೇತೃತ್ವದ ಆರು ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸರ್ವಾನುಮತದಿಂದ ಅನುಮೋದನೆ ನೀಡಿತು.

ಈ ಹೆಚ್ಚಳದೊಂದಿಗೆ ರೆಪೊ ದರವೀಗ ಕೋವಿಡ್–19 ಸಾಂಕ್ರಾಮಿಕಕ್ಕಿಂತ ಮೊದಲಿನ ಹಂತಕ್ಕೆ ತಲುಪಿದೆ. 2019ರ ಆಗಸ್ಟ್‌ನಲ್ಲಿ ರೆಪೊ ದರ ಇದೇ ಮಟ್ಟದಲ್ಲಿತ್ತು.

ಆರ್‌ಬಿಐ ಹಣಕಾಸು ನೀತಿಯ ನಿರೀಕ್ಷೆ, ತೈಲ ಬೆಲೆ ಕುಸಿತ, ಡಾಲರ್‌ ಅಪಮೌಲ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಆರಂಭಿಕ ವಹಿವಾಟಿನ ಸಂದರ್ಭ ರೂಪಾಯಿ ಮೌಲ್ಯಡಾಲರ್ ಎದುರು46 ಪೈಸೆ ಗಳಿಕೆ ದಾಖಲಿಸಿದೆ.

ಸತತ ಮೂರನೇ ಬಾರಿಗೆ ಹೆಚ್ಚಳ

ಆರ್‌ಬಿಐಯು ಸತತ ಮೂರನೇ ಬಾರಿಗೆ ರೆಪೊ ದರ ಹೆಚ್ಚಳ ಮಾಡಿದೆ. ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಸಲುವಾಗಿ ಪ್ರಮುಖ ನಿರ್ಧಾರ ಕೈಗೊಂಡಿದ್ದ ಆರ್‌ಬಿಐ, ರೆಪೊ ದರವನ್ನು ಮೇ ತಿಂಗಳಲ್ಲಿ ಶೇ 0.40 ಹಾಗೂ ಜೂನ್‌ನಲ್ಲಿ ಶೇ 0.50 ಹೆಚ್ಚಳ ಮಾಡಿತ್ತು.

ಹೆಚ್ಚಲಿದೆ ಸಾಲದ ಮೇಲಿನ ಬಡ್ಡಿ ದರ

ದೇಶದ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐಯಿಂದ ಪಡೆಯುವ ಸಾಲದ ಬಡ್ಡಿ ದರವೇ ರೆಪೊ ದರ. ಹೀಗಾಗಿ, ಆರ್‌ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ಬ್ಯಾಂಕುಗಳು ಸಹ ಬಡ್ಡಿ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಗೃಹ, ವಾಹನ ಹಾಗೂ ಇತರ ಸಾಲಗಳ ಬಡ್ಡಿ ದರ ಇನ್ನಷ್ಟು ಜಾಸ್ತಿ ಆಗಲಿದೆ.

ಈ ಹಿಂದೆ ಮೇಮತ್ತುಜೂನ್‌ ತಿಂಗಳಲ್ಲಿ ರೆ‍ಪೊ ದರ ಹೆಚ್ಚಿಸಿದ್ದಾಗಹಲವು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳು ಬಡ್ಡಿ ದರ ಹೆಚ್ಚಳ ಮಾಡಿದ್ದವು.ಐಸಿಐಸಿಐ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಮೇ 5ರಂದು ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿದ್ದವು. ಐಸಿಐಸಿಐ ಬ್ಯಾಂಕ್‌ ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್‌ ಲೆಂಡಿಂಗ್ ರೇಟ್‌ (ಇಬಿಎಲ್‌ಆರ್‌) ಅನ್ನು ಶೇ 8.10ಕ್ಕೆ ಹೆಚ್ಚಿಸಿದ್ದರೆ, ಬ್ಯಾಂಕ್‌ ಆಫ್‌ ಬರೋಡಾ ಸಾಲದ ಮೇಲಿನ ಬಡ್ಡಿದರವನ್ನು ಅನ್ನು ಶೇ 6.90ಕ್ಕೆ ಏರಿಕೆ ಮಾಡಿತ್ತು.ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಜೂನ್ 7ರಂದು ಶೇ 0.35ರಷ್ಟು ಹೆಚ್ಚಳ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT