ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲಾವಣೆಯಲ್ಲಿ ಇರಲಿವೆ ಹಳೆಯ ₹100ರ ನೋಟು

Last Updated 25 ಜನವರಿ 2021, 16:12 IST
ಅಕ್ಷರ ಗಾತ್ರ

ಬೆಂಗಳೂರು: ಹಳೆಯ ₹ 100, ₹ 10 ಮತ್ತು ₹ 5 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗುತ್ತದೆ ಎಂಬ ವರದಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಅಲ್ಲಗಳೆದಿದೆ.

‘₹ 100, ₹ 10 ಮತ್ತು ₹ 5ರ ಮುಖಬೆಲೆಯ ಹಳೆಯ ನೋಟುಗಳನ್ನು ಸದ್ಯದಲ್ಲೇ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗುತ್ತದೆ ಎಂಬ ವರದಿಗಳು ತಪ್ಪು ಎಂದು ಸ್ಪಷ್ಟಪಡಿಸುತ್ತಿದ್ದೇವೆ’ ಎಂದು ಆರ್‌ಬಿಐ ಟ್ವೀಟ್ ಮಾಡಿದೆ.

2018ರ ಜುಲೈ ತಿಂಗಳಲ್ಲಿ ಹೊಸ ಮಾದರಿಯ ₹ 100 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಡುಗಡೆ ಮಾಡಿದ್ದ ಆರ್‌ಬಿಐ, ‘ಹಿಂದೆ ಚಲಾವಣೆಗೆ ಬಿಟ್ಟಿದ್ದ ₹ 100 ಮುಖಬೆಲೆಯ ನೋಟುಗಳು ಕೂಡ ಮಾನ್ಯವಾಗಿ ಇರಲಿವೆ’ ಎಂದು ಹೇಳಿತ್ತು.

ಮಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆರ್‌ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ. ಮಹೇಶ್, ‘ಈಗಾಗಲೇ ಬಿಡುಗಡೆಗೊಂಡಿರುವ ₹ 100 ಮುಖಬೆಲೆಯ ಸ್ವಚ್ಛವಾದ ಹೊಸ ಸರಣಿಯ ನೋಟುಗಳು ಜನರ ಕೈಯಲ್ಲಿರುವಂತೆ ಮಾಡುವ ಉದ್ದೇಶದಿಂದ ಹಳೆಯ ಸರಣಿಯ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT