ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಬಾಕಿ, ಆಡಳಿತಾತ್ಮಕ ವೈಫಲ್ಯ: ರಿಲಯನ್ಸ್‌ ಕ್ಯಾಪಿಟಲ್‌ ಆಡಳಿತ ಮಂಡಳಿ ರದ್ದು

ಸಾಲ ಬಾಕಿ, ಆಡಳಿತಾತ್ಮಕ ವೈಫಲ್ಯ: ಆರ್‌ಬಿಐ ಕ್ರಮ
Last Updated 29 ನವೆಂಬರ್ 2021, 14:13 IST
ಅಕ್ಷರ ಗಾತ್ರ

ಮುಂಬೈ: ನಷ್ಟದಲ್ಲಿರುವ ರಿಲಯನ್ಸ್‌ ಕ್ಯಾಪಿಟಲ್‌ ಲಿಮಿಟೆಡ್‌ನ (ಆರ್‌ಸಿಎಲ್‌) ಆಡಳಿತ ಮಂಡಳಿಯನ್ನು ರದ್ದು ಮಾಡಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.

ಸಾಲ ಮರುಪಾವತಿಸದೇ ಇರುವುದು ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿನ ವೈಫಲ್ಯದಿಂದಾಗಿ ಮಂಡಳಿಯ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಕಂಪನಿಯ ಆಡಳಿತಾಧಿಕಾರಿ ಆಗಿ ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್‌ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದೆ.

ಕಂಪನಿಯ ವಿರುದ್ಧ ಶೀಘ್ರದಲ್ಲೇ ದಿವಾಳಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಆರ್‌ಬಿಐನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಿವಾಳಿ ಪ್ರಕ್ರಿಯೆಯ ನಿರ್ವಹಣೆಗಾಗಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ‘ಎನ್‌ಸಿಎಲ್‌ಟಿ’ಯ ಮುಂಬೈ ಪೀಠಕ್ಕೆ ಆರ್‌ಬಿಐ ಕೇಳಲಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಒಟ್ಟಾರೆ ನಷ್ಟವು ₹ 40 ಸಾವಿರ ಕೋಟಿಗಳಷ್ಟಿದೆ ಎಂದುಕಂಪನಿಯ ಷೇರುದಾರರಿಗೆ ಮಾಹಿತಿ ನೀಡಿತ್ತು.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟವು ₹ 1,156 ಕೋಟಿಗಳಷ್ಟಾಗಿದೆ. 2020–21ನೇ ಹಣಕಾಸು ವರ್ಷದಲ್ಲಿ ಕಂಪನಿಯು ₹ 9,287 ಕೋಟಿಗಳಷ್ಟು ನಷ್ಟ ಅನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT