ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರ ಇಳಿಕೆ ಮಾಡಿದ್ದರಿಂದ ಮನೆಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ರಿಯಲ್ ಎಸ್ಟೇಟ್ ಡೆವಲಪರ್ಗಳು ಹೇಳಿದ್ದಾರೆ.

ಮನೆಗಳ ಖರೀದಿಗೆ ಸಾಲ ಮಾಡುವವರಿಗೆ ರೆಪೊ ದರ ಇಳಿಕೆಯಿಂದ ಅನುಕೂಲ ಆಗಲಿದೆ. ಜೊತೆಗೆ ವಸತಿ ಯೋಜನೆಗಳ ಮೇಲೆ ಹೂಡಿಕೆ ಮಾಡುವವರಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.

‘ಶೇ 0.25ರಷ್ಟು ರೆಪೊ ದರ ಇಳಿಕೆಯು ರಿಯಲ್ ಎಸ್ಟೇಟ್ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಇದು ಗೃಹ ಸಾಲಗಳನ್ನು ಕೈಗಟಕುವಂತೆ ಮಾಡಲಿದ್ದು, ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲಿದೆ. ಜೊತೆಗೆ ಮನೆಗಳಿಗೆ ಬೇಡಿಕೆ ಹೆಚ್ಚಲಿದೆ’ ಎಂದು ನರೆಡ್ಕೊ ರಾಷ್ಟ್ರೀಯ ಅಧ್ಯಕ್ಷ ಜಿ.ಹರಿಬಾಬು ಹೇಳಿದ್ದಾರೆ.

ಶುಕ್ರವಾರ ಆರ್ಬಿಐ, ಶೇ 6.50ರಷ್ಟಿದ್ದ ರೆಪೊ ದರವನ್ನು ಶೇ 6.25ಕ್ಕೆ ಇಳಿಸಿತ್ತು.

ಆರ್ಬಿಐ ರೆಪೊ ದರ ಕಡಿತವು ವಲಯದ ಮೇಲೆ ಸೀಮಿತ ಪರಿಣಾಮ ಬೀರಬಹುದು. ಹೆಚ್ಚಿನ ಇಳಿಕೆ ಮಾಡಿದ್ದರೆ, ಮನೆಗಳಿಗೆ ಹೆಚ್ಚಿನ ಬೇಡಿಕೆ ದೊರೆಯುತ್ತಿತ್ತು ಎಂದು ರಿಯಲ್ ಎಸ್ಟೇಟ್ ಕಂಪನಿಗಳ ಒಕ್ಕೂಟ ಕ್ರೆಡಾಯ್ ಹೇಳಿದೆ.

‘ಆರ್ಬಿಐ ರೆಪೊ ದರ ಕಡಿತವು, ಜನರಲ್ಲಿ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜಿಸುವ ಗುರಿಯನ್ನು ಹೊಂದಿರುವ ಬಜೆಟ್ಗೆ ಪೂರಕವಾಗಿದೆ’ ಎಂದು ಕ್ರೆಡಾಯ್ ರಾಷ್ಟ್ರೀಯ ಅಧ್ಯಕ್ಷ ಬೊಮನ್ ಇರಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.