ಗುರುವಾರ , ಮೇ 19, 2022
21 °C

ಜಿಯೊದಿಂದ ‘ತುರ್ತು ಡೇಟಾ ಸಾಲ’ ಯೋಜನೆ: ₹11ರ ಮೌಲ್ಯಕ್ಕೆ 1ಜಿಬಿ ಡೇಟಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಿಲಯನ್ಸ್‌ ಜಿಯೊ ಕಂಪನಿಯು ತನ್ನ ಪ್ರಿಪೇಯ್ಡ್‌ ಗ್ರಾಹಕರಿಗೆ ಈಗ ರೀಚಾರ್ಜ್‌ ಮಾಡಿ ನಂತರ ಪಾವತಿಸುವ ‘ತುರ್ತು ಡೇಟಾ ಸಾಲ’ ಯೋಜನೆಯನ್ನು ಬಿಡುಗಡೆ ಮಾಡಿದೆ.

ಮೈ ಜಿಯೊ ಆ್ಯಪ್‌ ಮೂಲಕ ತುರ್ತು ಡೇಟಾ ಸಾಲ ಪಡೆಯಬಹುದಾಗಿದೆ. ₹ 11ರ ಮೌಲ್ಯಕ್ಕೆ 1ಜಿಬಿ ಡೇಟಾ ಸಿಗಲಿದೆ. ಈ ರೀತಿ ಒಟ್ಟಾರೆ ಐದು ಬಾರಿ ತುರ್ತು ಡೇಟಾ ಸಾಲ ಪಡೆಯಬಹುದು ಎಂದು ಮೂಲಗಳು ಹೇಳಿವೆ.

ಹಲವು ಕಾರಣಗಳಿಂದಾಗಿ ಪ್ರತಿಯೊಬ್ಬ ಗ್ರಾಹಕರೂ ತಕ್ಷಣವೇ ಡೇಟಾ ಟಾಪ್‌ ಅಪ್‌ ಖರೀದಿಸುವ ಸ್ಥಿತಿಯಲ್ಲಿ ಇರುವುದಿಲ್ಲ ಎನ್ನುವುದನ್ನು ದೂರಸಂಪರ್ಕ ಕಂಪನಿಯು ಅರಿತುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಗರಿಷ್ಠ ವೇಗದ ನಿತ್ಯದ ಡೇಟಾ ಮಿತಿಯು ಮುಗಿದ ತಕ್ಷಣವೇ ರಿಚಾರ್ಜ್‌ ಮಾಡಿಸಲು ಸಾಧ್ಯವಾಗದೇ ಇರುವವರಿಗೆ ಜಿಯೊದ ಹೊಸ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಆಗಲಿದೆ ಎಂದಿವೆ.

ಇದನ್ನೂ ಓದಿ... ಮಹಾರಾಷ್ಟ್ರ: ಜು. 5ರಂದು ವಿಚಾರಣೆಗೆ ಹಾಜರಾಗಲು ದೇಶಮುಖ್‌ಗೆ ಇ.ಡಿ ಸಮನ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು