ಶನಿವಾರ, ಮಾರ್ಚ್ 6, 2021
31 °C

ರಿಲಯನ್ಸ್ ಡಿಜಿಟಲ್‌ನಲ್ಲಿ ವಿನಾಯಿತಿಯ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯುವ ‘ಡಿಜಿಟಲ್ ಇಂಡಿಯಾ ಸೇಲ್’ ಕಾರ್ಯಕ್ರಮಕ್ಕಾಗಿ ರಿಲಯನ್ಸ್ ಡಿಜಿಟಲ್ ಕಂಪನಿಯು ಬುಕಿಂಗ್–ಪೂರ್ವ ಕೊಡುಗೆಗಳನ್ನು ಪ್ರಕಟಿಸಿದೆ. ‘ಈ ವರ್ಷದ ಕೊಡುಗೆಗಳು ಹೆಚ್ಚು ದೊಡ್ಡದಾಗಿವೆ, ಉತ್ತಮವಾಗಿವೆ’ ಎಂದು ಕಂಪನಿ ಹೇಳಿಕೊಂಡಿದೆ.

ಬುಕಿಂಗ್–ಪೂರ್ವ ಅವಧಿಯು ಸೋಮವಾರದಿಂದ ಬುಧವಾರದವರೆಗೆ ಇರಲಿದ್ದು, ಗ್ರಾಹಕರು ₹ 1000 ಪಾವತಿಸಿ ತಮ್ಮ ಇಷ್ಟದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬುಕ್ ಮಾಡಬಹುದು. ಹೀಗೆ ಮಾಡುವ ಮೂಲಕ ಅವರು, ‘ಡಿಜಿಟಲ್ ಇಂಡಿಯಾ ಸೇಲ್’ ಅವಧಿಯಲ್ಲಿ ಹೆಚ್ಚುವರಿಯಾಗಿ ₹ 1000 ವಿನಾಯಿತಿ ಪಡೆದುಕೊಳ್ಳಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

₹ 2000 ಪಾವತಿಸಿ ಬುಕಿಂಗ್–ಪೂರ್ವ ಅವಧಿಯಲ್ಲಿ ಬುಕ್ ಮಾಡಿದರೆ, ಇತರ ಎಲ್ಲ ಕೊಡುಗೆಗಳ ಜೊತೆಯಲ್ಲಿ ಹೆಚ್ಚುವರಿಯಾಗಿ ₹ 2000 ವಿನಾಯಿತಿ ಸಿಗಲಿದೆ. ಈ ಕೊಡುಗೆಗಳು ಜನವರಿ 22ರಿಂದ 26ರವರೆಗೆ ನಡೆಯುವ ‘ಡಿಜಿಟಲ್ ಇಂಡಿಯಾ ಸೇಲ್’ ಕಾರ್ಯಕ್ರಮದಲ್ಲಿ ಲಭ್ಯವಿರಲಿವೆ.

ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ, ಮೈಜಿಯೊ ಸ್ಟೋರ್‌ನಲ್ಲಿ ಹಾಗೂ ಆನ್‌ಲೈನ್‌ ಮಾರಾಟ ಮಳಿಗೆಯಾದ www.reliancedigital.inನಲ್ಲಿ ಈ ಕೊಡುಗೆ ಲಭ್ಯವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು