ಶನಿವಾರ, ಸೆಪ್ಟೆಂಬರ್ 18, 2021
28 °C

₹ 15 ಲಕ್ಷ ಕೋಟಿ ಗಡಿ ದಾಟಿದ ರಿಲಯನ್ಸ್ ಮಾರುಕಟ್ಟೆ ಮೌಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಕಂಪನಿಯ ಮಾರುಕಟ್ಟೆ ಬಂಡವಾಳದ ಮೌಲ್ಯವು ಶುಕ್ರವಾರ ದಾಖಲೆಯ  ₹ 15 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಮಾರುಕಟ್ಟೆ ಬಂಡವಾಳದ ಲೆಕ್ಕಾಚಾರದಲ್ಲಿ ಈ ಮಟ್ಟವನ್ನು ತಲುಪಿರುವ ಭಾರತದ ಮೊದಲ ಕಂಪನಿ ಆರ್‌ಐಎಲ್.

ಆರ್‌ಐಎಲ್‌ನ ಷೇರು ಮೌಲ್ಯವು ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ಶೇಕಡ 4.12ರಷ್ಟು ಏರಿಕೆ ಕಂಡು, ₹ 2,388.25ಕ್ಕೆ ತಲುಪಿದೆ. ಈ ವರ್ಷದ ಜೂನ್‌ 3ರಂದು ಕಂಪನಿಯ ಮಾರುಕಟ್ಟೆ ಬಂಡವಾಳದ ಮೌಲ್ಯವು ₹ 14 ಲಕ್ಷ ಕೋಟಿಯ ಗಡಿ ದಾಟಿತ್ತು. ಕಂಪನಿಯ ಷೇರು ಮೌಲ್ಯವು ಈ ವರ್ಷದಲ್ಲಿ ಶೇಕಡ 20ರಷ್ಟು ಹೆಚ್ಚಳ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು