ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಕಂಪನಿಯ ಲಾಭದ ಪ್ರಮಾಣವು ಡಿಸೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 12ರಷ್ಟು ಹೆಚ್ಚಳ ಆಗಿದೆ.

ಕಂಪನಿಯ ಒಟ್ಟು ಲಾಭವು ₹ 13,101 ಕೋಟಿಯಷ್ಟಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹ 11,640 ಕೋಟಿ ಲಾಭ ಗಳಿಸಿತ್ತು. ಈ ಬಾರಿಯ ಲಾಭದ ಪ್ರಮಾಣವು ನಿರೀಕ್ಷೆಗಿಂತಲೂ ಹೆಚ್ಚು ಎನ್ನಲಾಗಿದೆ.

ತೈಲ, ರಾಸಾಯನಿಕ ವಹಿವಾಟಿನಿಂದ ಬಂದ ಆದಾಯವು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ. ಆದರೆ, ದೂರಸಂಪರ್ಕ ಮತ್ತು ರಿಟೇಲ್ ವಹಿವಾಟುಗಳಿಂದ ಈ ಬಾರಿ ಹೆಚ್ಚಿನ ಆದಾಯ ಬಂದಿದೆ. ತೆರಿಗೆಪೂರ್ವ ಲಾಭದಲ್ಲಿ ಶೇಕಡ 56ರಷ್ಟು ಪಾಲು ಈ ಬಾರಿ ಜಿಯೊ ಮತ್ತು ರಿಲಯನ್ಸ್ ರಿಟೇಲ್ನಿಂದ ಬಂದಿದೆ ಎಂದು ಕಂಪನಿ ತಿಳಿಸಿದೆ.

ಜಿಯೊ ಲಾಭ: ಕಂಪನಿಯ ಅಂಗಸಂಸ್ಥೆಯಾದ ಜಿಯೊ ಲಾಭದ ಪ್ರಮಾಣವು ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 15.5ರಷ್ಟು ಹೆಚ್ಚಳ ಆಗಿದ್ದು, ₹ 3,489 ಕೋಟಿ ಲಾಭ ಗಳಿಸಿದೆ. ಕಂಪನಿಯು ಹೊಸದಾಗಿ 2.5 ಕೋಟಿಗಿಂತ ಹೆಚ್ಚಿನ ಗ್ರಾಹಕರನ್ನು ಪಡೆದುಕೊಂಡಿದೆ. ಪ್ರತಿ ಗ್ರಾಹಕನಿಂದ ಬರುವ ಆದಾಯವು ತಿಂಗಳಿಗೆ ₹ 151ಕ್ಕೆ ಹೆಚ್ಚಳವಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕನಿಂದ ಬರುವ ಆದಾಯವು ₹ 145 ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.