ಗುರುವಾರ , ಡಿಸೆಂಬರ್ 5, 2019
24 °C

ಡಿಸೆಂಬರ್ 6ರಿಂದ ಜಿಯೊ: ‘ಆಲ್‌ ಇನ್‌ ಒನ್‌’ ಪ್ಲ್ಯಾನ್

Published:
Updated:
prajavani

ನವದೆಹಲಿ: ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊ ಕಂಪನಿಯು ಇದೇ 6ರಿಂದ ತನ್ನ ಹೊಸ ‘ಆಲ್‌ ಇನ್‌ ಒನ್‌ ಪ್ಲ್ಯಾನ್‌’ ಪರಿಚಯಿಸಲಿದೆ.

ಕರೆ ಮತ್ತು ಡೇಟಾ ದರಗಳು ಗರಿಷ್ಠ ಶೇ 40ರಷ್ಟು ಏರಿಕೆಯಾಗಲಿವೆ. ಹೊಸ ಪ್ಲ್ಯಾನ್‌ ಪ್ರಕಾರ, ತನ್ನ ಗ್ರಾಹಕರು ಶೇ 300ರಷ್ಟು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ.  ಈ ‘ಆಲ್‌ ಇನ್‌ ಒನ್‌’ ಪ್ಲ್ಯಾನ್‌ನಡಿ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಲಭ್ಯ ಇರಲಿದೆ. ದೂರಸಂಪರ್ಕ ದರಗಳ ಪರಿಷ್ಕರಣೆ ಸಂಬಂಧ ಸರ್ಕಾರದ ಜತೆ ನಿರಂತರವಾಗಿ ಕೆಲಸ ಮಾಡಲಿದೆ. ಇತರ ದೂರಸಂಪರ್ಕ ಸೇವಾ ಸಂಸ್ಥೆಗಳ ಮೊಬೈಲ್‌ಗಳಿಗೆ ಮಾಡುವ ಹೊರ ಹೋಗುವ ಕರೆಗಳಿಗೆ ನ್ಯಾಯೋಚಿತ ಬಳಕೆ ನೀತಿಯ ಕೊಡುಗೆ ನೀಡುವುದಾಗಿ ಕಂಪನಿಯು ತಿಳಿಸಿದೆ.

ಇದನ್ನೂ ಓದಿ: ದರ ಹೆಚ್ಚಳಕ್ಕೂ ಮುನ್ನ ಜಿಯೊ ₹444×4 ಆಲ್‌–ಇನ್‌–ಒನ್‌ ಪ್ಲಾನ್; 336 ದಿನಗಳ ಸೇವೆ

ಭಾರಿ ನಷ್ಟದಲ್ಲಿರುವ ಈ ಮೂರೂ ಮೊಬೈಲ್‌ ಸೇವಾ ಕಂಪನಿಗಳು ಹೊರೆ ಕಡಿಮೆ ಮಾಡಿಕೊಳ್ಳಲು ಗ್ರಾಹಕರಿಗೆ ನೀಡುವ ಸೇವೆಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸಲು ನಿರ್ಧರಿಸಿದ್ದವು. ಮೊಬೈಲ್‌ ಸೇವಾ ವಹಿವಾಟು ಲಾಭದಾಯಕವಾಗಿರಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಇತ್ತೀಚೆಗಷ್ಟೇ ಪ್ರಕಟಿಸಿದ್ದವು.

ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ವೊಡಾಫೋನ್‌ ಐಡಿಯಾ ಮತ್ತು ಏರ್‌ಟೆಲ್‌ ಕಂಪನಿಗಳ ಒಟ್ಟಾರೆ ನಷ್ಟ ₹ 74 ಸಾವಿರ ಕೋಟಿಗಳಷ್ಟಾಗಿದೆ. ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಪ್ರಕರಣದಲ್ಲಿ ಮೊಬೈಲ್‌ ಕಂಪನಿಗಳು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್‌ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಾಗಿದೆ.

ಇದನ್ನೂ ಓದಿ: 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು