ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ನಿವ್ವಳ ಲಾಭ ಹೆಚ್ಚಳ

Published 19 ಜನವರಿ 2024, 16:09 IST
Last Updated 19 ಜನವರಿ 2024, 16:09 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2023–24ರ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್, ರಿಲಯನ್ಸ್‌ ಜಿಯೊ ಮತ್ತು ರಿಲಯನ್ಸ್‌ ರಿಟೇಲ್‌ನ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ ಲಾಭದಲ್ಲಿ ಶೇ 9.3ರಷ್ಟು ಏರಿಕೆ ಆಗಿದೆ. 2022–23ರ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ₹15,792 ಕೋಟಿ ನಿವ್ವಳ ಲಾಭ ಗಳಿಸಿತ್ತು. 2023–24ರ ಅವಧಿಯಲ್ಲಿ ₹17,265 ಕೋಟಿಗೆ ಏರಿಕೆಯಾಗಿದೆ. ಕಾರ್ಯಾಚರಣಾ ವರಮಾನವು ₹2.2 ಲಕ್ಷ ಕೋಟಿಗೆ ತಲುಪಿದೆ.

ಜಿಯೊ ಲಾಭ ಹೆಚ್ಚಳ:

ರಿಲಯನ್ಸ್‌ ಜಿಯೊದ ಲಾಭದಲ್ಲಿ ಶೇ 12.2ರಷ್ಟು ಏರಿಕೆಯಾಗಿದೆ. 2022–23ರಲ್ಲಿ ₹4,638 ಕೋಟಿ ನಿವ್ವಳ ಲಾಭಗಳಿಸಿದ್ದ ಕಂಪನಿಯು 2023–24ರಲ್ಲಿ ₹5,208 ಕೋಟಿ ಲಾಭ ದಾಖಲಿಸಿದೆ. ಕಂಪನಿಯ ಕಾರ್ಯಾಚರಣಾ ವರಮಾನದಲ್ಲಿಯೂ ಶೇ 10.3ರಷ್ಟು ಏರಿಕೆಯಾಗಿದೆ. ಒಟ್ಟಾರೆ ₹22,998 ಕೋಟಿಯಿಂದ ₹25,368 ಕೋಟಿಗೆ ತಲುಪಿದೆ ಎಂದು ಕಂಪನಿ ತಿಳಿಸಿದೆ.

ರಿಟೇಲ್‌ ಲಾಭದಲ್ಲೂ ಏರಿಕೆ:

ರಿಲಯನ್ಸ್‌ ರಿಟೇಲ್‌ ಶೇ 31.87ರಷ್ಟು ಲಾಭ ದಾಖಲಿಸಿದೆ.

ಕಂಪನಿಯು 2022–23ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹2,400 ಕೋಟಿ ಲಾಭ ದಾಖಲಿಸಿತ್ತು. 2023–24ರಲ್ಲಿ ₹3,165 ಕೋಟಿಗೆ ಏರಿಕೆಯಾಗಿದೆ. ಕಾರ್ಯಾಚರಣಾ ವರಮಾನವು ₹67,623 ಕೋಟಿಯಿಂದ ₹74,373 ಕೋಟಿಗೆ (ಶೇ 23.75) ಏರಿಕೆಯಾಗಿದೆ. ರಿಲಯನ್ಸ್‌ ರಿಟೇಲ್‌ನ ಒಟ್ಟಾರೆ ವರಮಾನ ₹83,063 ಕೋಟಿ ಆಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT