ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಪದಾರ್ಥಗಳಿಗೆ ಜಿಎಸ್‌ಟಿ ಇಲ್ಲ: ನಿರ್ಮಲಾ ಸೀತಾರಾಮನ್ ಟ್ವೀಟ್

ಅಕ್ಷರ ಗಾತ್ರ

ನವದೆಹಲಿ: ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಹೇರಿಕೆ ಬಗ್ಗೆ ಸಂಸತ್ತಿನಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಯಾವೆಲ್ಲ ಪದಾರ್ಥಗಳಿಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿನಾಯಿತಿ ನೀಡಲಾಗಿದೆ ಎಂಬ ಕುರಿತು ಸ್ಪಷ್ಟನೆ ನೀಡಿ ಹಣಕಾಸು ಸಚಿವೆ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

ಚಿಲ್ಲರೆ ಮಾರಾಟ, ಪ್ಯಾಕ್ ಮಾಡದ ಅಥವಾ ಲೇಬಲ್ ಇಲ್ಲದ ಕೆಲ ಪದಾರ್ಥಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದ್ದು,ಈ ಕುರಿತ ಪಟ್ಟಿಯನ್ನು ಅವರು ಟ್ಗೀಟ್ಳಮಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ರಾಂಡ್‌ರಹಿತ/ ಲೇಬಲ್ ಇಲ್ಲದ ಕಾಳುಗಳು, ಹಿಟ್ಟು ಮತ್ತು ಮೊಸರು/ಲಸ್ಸಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಓಟ್ಸ್, ಗೋಧಿ, ಜೋಳವೂ ಈ ಪಟ್ಟಿಯಲ್ಲಿದೆ.

ಪಟ್ಟಿ ಇಂತಿದೆ..

* ಬೆಳೆ ಕಾಳುಗಳು
* ಗೋಧಿ
* ಓಟ್ಸ್
* ಮಂಡಕ್ಕಿ
* ರವೆ
* ಜೋಳ
* ಕಡಳೆಹಿಟ್ಟು
* ಮೊಸರು/ಲಸ್ಸಿ

‘ಜಿಎಸ್‌ಟಿ ವಿಧಿಸುವ ಕುರಿತಂತೆ ಮಂಡಳಿಯು ಅವಿರೋಧವಾಗಿ ಈ ತೀರ್ಮಾನ ತೆಗೆದುಕೊಂಡಿದೆ. ಜೂನ್ 28, 2022ರಂದು ಚಂಡೀಗಡದಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 27ನೇ ಸಭೆಯಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳೂ ಇದ್ದರು’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT