ಶುಕ್ರವಾರ, ಜನವರಿ 17, 2020
24 °C

ರೆನೊ ಇಂಡಿಯಾ: ಮಾರಾಟ ಶೇ 8ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಕಾರ್‌ ತಯಾರಿಕಾ ಕಂಪನಿ ರೆನೊ ಇಂಡಿಯಾ, 2019ರಲ್ಲಿ 88,869 ಕಾರ್‌ಗಳನ್ನು ಮಾರಾಟ ಮಾಡಿದೆ.

2018ರಲ್ಲಿನ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಶೇ 8ರಷ್ಟು ಹೆಚ್ಚಳ ಸಾಧಿಸಲಾಗಿದೆ. ಕ್ಯಾಲೆಂಡರ್‌ ವರ್ಷದ ಕೊನೆಯ ತ್ರೈಮಾಸಿಕದಲ್ಲಿ 34,362 ಕಾರ್‌ಗಳು ಮಾರಾಟವಾಗಿವೆ. ವರ್ಷದ ಹಿಂದಿನ ಮಾರಾಟಕ್ಕೆ ಹೋಲಿಸಿದರೆ ಇದು ಶೇ 68 ರಷ್ಟು ಹೆಚ್ಚಳ ಕಂಡಿದೆ. ಆಗಸ್ಟ್‌ನಲ್ಲಿ ಪರಿಚಯಿಸಿದ್ದ 7 ಸೀಟುಗಳ ಕಾಂಪ್ಯಾಕ್ಟ್‌ ಮಲ್ಟಿಪರ್ಪಸ್‌ ವೆಹಿಕಲ್‌ (ಎಂಪಿವಿ) ‘ಟ್ರೈಬರ್‌’ನ ಮಾರಾಟ 24,142ಕ್ಕೆ ತಲುಪಿದೆ.

‘2020ರಲ್ಲಿ ವಾಹನಗಳ ತಯಾರಿಕೆಯನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸಲಾಗಿದೆ. ದ್ವಿತೀಯಾರ್ಧದಲ್ಲಿ ಹೊಸ ಕಾರ್‌, 2021ರ ಅಂತ್ಯಕ್ಕೆ ವಿದ್ಯುತ್‌ ಚಾಲಿತ ಕಾರ್‌ ಪರಿಚಯಿಸಲಾಗುವುದು’ ಎಂದು ಕಂಪನಿಯ ಸಿಇಒ ವೆಂಕಟರಾಂ ಎಂ. ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು