ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆಯಾಗಿಲ್ಲ: ಏರ್‌ಟೆಲ್‌

Published 5 ಜುಲೈ 2024, 16:18 IST
Last Updated 5 ಜುಲೈ 2024, 16:18 IST
ಅಕ್ಷರ ಗಾತ್ರ

ನವದೆಹಲಿ: ಬಳಕೆದಾರರ ದತ್ತಾಂಶ ಸೋರಿಕೆಯಾಗಿಲ್ಲ. ಈ ಕುರಿತ ಆರೋಪ ಸತ್ಯಕ್ಕೆ ದೂರವಾದುದು ಎಂದು ಭಾರ್ತಿ ಏರ್‌ಟೆಲ್‌ ಕಂಪನಿ ಸ್ಪಷ್ಟಪಡಿಸಿದೆ.

ಕೆಲವರು ಕಂಪನಿಯ ಬ್ರ್ಯಾಂಡ್‌ಗೆ ಕಳಂಕ ತರಲು ಷಡ್ಯಂತ್ರ ರೂಪಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದು, ಯಾವುದೇ ನಿಯಮಾವಳಿಗಳು ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ.

ಆರೋಪ ಏನು?:

ಏರ್‌ಟೆಲ್‌ನ 37.5 ಕೋಟಿಗೂ ಹೆಚ್ಚು ಬಳಕೆದಾರರ ದತ್ತಾಂಶವನ್ನು ಹ್ಯಾಕ್‌ ಮಾಡಲಾಗಿದೆ. ಡಾರ್ಕ್ ವೆಬ್‌ ವೇದಿಕೆಯಲ್ಲಿ ‘ಕ್ಸೆನ್‌ಜೆನ್‌’ ಹೆಸರಿನ ಖಾತೆಯಡಿ ಬಳಕೆದಾರರ ಮೊಬೈಲ್‌ ಫೋನ್ ನಂಬರ್‌, ಇ–ಮೇಲ್ ವಿಳಾಸ, ಪೋಷಕರ ಹೆಸರು, ಆಧಾರ್ ಸೇರಿ ಖಾಸಗಿ ಮಾಹಿತಿಯನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT