ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ಬುಧವಾರದ ವಹಿವಾಟಿನಲ್ಲಿ ರೂಪಾಯಿಯು 2 ಪೈಸೆಯಷ್ಟು ಮೌಲ್ಯ ಕಳೆದುಕೊಂಡು ಡಾಲರ್ ಎದುರು ₹88.75ರ ಮಟ್ಟಕ್ಕೆ ಬಂದಿದೆ.

ಅಮೆರಿಕವು ಎಚ್–1ಬಿ ವೀಸಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದರ ಪರಿಣಾಮವು ಭಾರತದ ಐ.ಟಿ. ಸೇವೆಗಳ ರಫ್ತಿನ ಮೇಲೆ ಹೇಗಿರಲಿದೆ ಎಂಬ ಬಗ್ಗೆ ಹೂಡಿಕೆದಾರರಿಗೆ ಕಳವಳ ಇದೆ. ಹಾಗೆಯೇ, ಜಾಗತಿಕ ವಾಣಿಜ್ಯ ಅನಿಶ್ಚಿತತೆಗಳು ಕೂಡ ಅವರಲ್ಲಿ ಕಳವಳ ಮೂಡಿಸಿವೆ. ಹೀಗಾಗಿ ಅವರು ದೇಶದ ಬಂಡವಾಳ ಮಾರುಕಟ್ಟೆಗಳಿಂದ ಹಣ ಹಿಂಪಡೆಯುವುದು ಮುಂದುವರಿದಿದೆ. ಇದು ರೂಪಾಯಿ ಮೌಲ್ಯ ಕುಸಿತಕ್ಕೆ ಒಂದು ಕಾರಣ ಎಂದು ವರ್ತಕರು ತಿಳಿಸಿದ್ದಾರೆ. ರೂಪಾಯಿ ಮೌಲ್ಯವು 88.75ಕ್ಕೆ ಬಂದಿರುವುದು ಇದುವರೆಗಿನ ಕನಿಷ್ಠ ಮಟ್ಟ.

ಮಂಗಳವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 45 ಪೈಸೆಯಷ್ಟು ಕುಸಿದಿತ್ತು. ‘ಅಮೆರಿಕವು ಎಚ್–1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿರುವುದರ ಪರಿಣಾಮವಾಗಿ ರೂಪಾಯಿಯು ಅಮೆರಿಕದ ಡಾಲರ್ ಎದುರು ದುರ್ಬಲವಾಗಿಯೇ ಇರಲಿದೆ ಎಂಬುದು ನಮ್ಮ ನಿರೀಕ್ಷೆ. ದೇಶಿ ಬಂಡವಾಳ ಮಾರುಕಟ್ಟೆಯಲ್ಲಿನ ಮಂದಗತಿ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟದಲ್ಲಿ ತೊಡಗಿರುವುದು ರೂಪಾಯಿ ಮೌಲ್ಯದ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಸಬಹುದು’ ಎಂದು ಮಿರಾಯ್ ಅಸೆಟ್ ಶೇರ್ಖಾನ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.