ಶುಕ್ರವಾರ, ಫೆಬ್ರವರಿ 26, 2021
20 °C

‘ಸ್ಯಾಮ್ಸಂಗ್‌: ಅತ್ಯಂತ ಆಕರ್ಷಕ ಬ್ರ್ಯಾಂಡ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದ ಅತ್ಯಂತ ಆಕರ್ಷಕ ಬ್ರ್ಯಾಂಡ್‌ ವರದಿ–2018 ಅನ್ನು ಶುಕ್ರವಾರ ಇಲ್ಲಿ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಗ್ರಾಹಕರು ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಆಕರ್ಷಕ ಬ್ರ್ಯಾಂಡ್‌ ಎಂದು ಹೆಸರಿಸಿದ್ದಾರೆ.

ದೇಶದ 16 ಪ್ರಮುಖ ನಗರಗಳಲ್ಲಿ 2,500 ಜನರ ಸಮೀಕ್ಷೆ ಆಧರಿಸಿ ಈ ಬ್ರ್ಯಾಂಡ್‌ ವರದಿ ಸಿದ್ಧಪಡಿಸಲಾಗಿದೆ. ನಗರದ ಗ್ರಾಹಕರು, ಐಫೋನ್‍ (ಅಖಿಲ ಭಾರತ ಮಟ್ಟದಲ್ಲಿ 3ನೆ ಸ್ಥಾನ) ಮತ್ತು ಮಾರುತಿ ಸುಜುಕಿಗೆ (ಅಖಿಲ ಭಾರತ 5ನೇ ಸ್ಥಾನ) ಕ್ರಮವಾಗಿ 2ನೇ ಮತ್ತು 3ನೇ ಸ್ಥಾನ ನೀಡಿದ್ದಾರೆ. ಗ್ರಾಹಕರ ಖರೀದಿ ಆಸಕ್ತಿಯನ್ನು ವೈಜ್ಞಾನಿಕವಾಗಿ ಅಳೆಯುವ ಟಿಆರ್‍ಎ ಸಂಶೋಧನೆ 2010ರಿಂದ ಬ್ರ್ಯಾಂಡ್‌ ಆಕರ್ಷಣೆ ಕುರಿತ ಸಂಶೋಧನೆ ನಡೆಸುತ್ತಾ ಬಂದಿದೆ.

‘ನಂತರದ ಸ್ಥಾನಗಳಲ್ಲಿ ಐಟಿಸಿ, ಹೋಂಡಾ, ಒಪ್ಪೊ, ಟೈಟಾನ್, ಹ್ಯೂಲೆಟ್ ಪಕಾರ್ಡ್, ವಿವೊ ಮತ್ತು ಟೊಯೋಟಾ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಅತ್ಯಂತ ಆಕರ್ಷಕ ಎಂದು ಆಯ್ಕೆಯಾದ ಬ್ರ್ಯಾಂಡ್‍ಗಳು ಅಖಿಲ ಭಾರತ ಶ್ರೇಣಿಗಿಂತ ಸಂಪೂರ್ಣ ಭಿನ್ನ ರೀತಿಯಲ್ಲಿವೆ. ಬೆಂಗಳೂರಿಗರು ಪ್ರತ್ಯೇಕ ರೀತಿಯಲ್ಲಿ ಚಿಂತಿಸುತ್ತಾರೆ ಎಂಬುದನ್ನು ಇದು ತೋರುತ್ತದೆ’ ಎಂದು ಟಿಆರ್‍ಎ ರಿಸರ್ಚ್‍ನ ಸಿಇಒ ಚಂದ್ರಮೌಳಿ ಎನ್. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು