ನವದೆಹಲಿ: ಎಸ್ಬಿಐ ಫಂಡ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್ನಲ್ಲಿನ (ಎಸ್ಬಿಐಎಫ್ಎಂಎಲ್) ಶೇ 10ರಷ್ಟು ಷೇರನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು (ಐಪಿಒ) ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಅಮುಂಡಿ ಇಂಡಿಯಾ ನಿರ್ಧರಿಸಿವೆ.

ಎಸ್ಬಿಐ ಫಂಡ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್ನಲ್ಲಿನ ತನ್ನ ಷೇರುಗಳ ಪೈಕಿ 3.20 ಕೋಟಿ (ಶೇ 6.30ರಷ್ಟು) ಈಕ್ವಿಟಿ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಷೇರುಪೇಟೆಗೆ ತಿಳಿಸಿದೆ.

ಅಮುಂಡಿ ಇಂಡಿಯಾ ಸಹ ಎಸ್ಬಿಐಎಫ್ಎಂಎಲ್ನಲ್ಲಿನ 1.88 ಕೋಟಿ (ಶೇ 3.70ರಷ್ಟು) ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಇವೆರಡೂ ಕಂಪನಿಗಳು ಒಟ್ಟು 5.08 ಕೋಟಿ (ಶೇ 10) ಷೇರುಗಳನ್ನು ಮಾರಾಟ ಮಾಡಲಿವೆ. ಈ ಐಪಿಒ ಪ್ರಕ್ರಿಯೆ 2026ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿವೆ.

ಪ್ರಸ್ತುತ ಎಸ್ಬಿಐಎಫ್ಎಂಎಲ್ನಲ್ಲಿ ಎಸ್ಬಿಐ ಶೇ 61.91 ಮತ್ತು ಅಮುಂಡಿ ಇಂಡಿಯಾ ಶೇ 36.36ರಷ್ಟು ಷೇರನ್ನು ಹೊಂದಿವೆ. ಎಸ್ಬಿಐ ಮ್ಯೂಚುವಲ್ ಫಂಡ್ 1987ರಲ್ಲಿ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.