ಭಾನುವಾರ, ಏಪ್ರಿಲ್ 18, 2021
31 °C

ಗೃಹ ಸಾಲ: ಬಡ್ಡಿ ಹೆಚ್ಚಿಸಿದ ಎಸ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ಗೃಹ ಸಾಲದ ಮೇಲಿನ ಬಡ್ಡಿಯನ್ನು ಶೇಕಡ 6.95ಕ್ಕೆ ಹೆಚ್ಚಿಸಿದೆ. ಇದರೊಂದಿಗೆ, ಅತ್ಯಂತ ಕಡಿಮೆ ಬಡ್ಡಿ ದರಕ್ಕೆ (ಶೇ 6.70) ಗೃಹ ಸಾಲ ನೀಡುವ ಕೊಡುಗೆಯು ಮಾರ್ಚ್‌ 31ಕ್ಕೆ ಕೊನೆಗೊಂಡಂತೆ ಆಗಿದೆ.

ಸೀಮಿತ ಅವಧಿಗೆ ಅನ್ವಯ ಆಗುವಂತೆ ಎಸ್‌ಬಿಐ ₹ 75 ಲಕ್ಷದವರೆಗಿನ ಗೃಹ ಸಾಲವನ್ನು ಶೇ 6.70ರ ಬಡ್ಡಿ ದರದಲ್ಲಿ ವಿತರಿಸಿತ್ತು. ₹ 75 ಲಕ್ಷಕ್ಕಿಂತ ಹೆಚ್ಚಿನ ₹ 5 ಕೋಟಿಗಿಂತ ಕಡಿಮೆಯ ಗೃಹಸಾಲಕ್ಕೆ ಬ್ಯಾಂಕ್‌ ಶೇ 6.75ರಷ್ಟು ಬಡ್ಡಿ ನಿಗದಿ ಮಾಡಿತ್ತು.

ಸೀಮಿತ ಅವಧಿಯ ಬಡ್ಡಿ ದರಕ್ಕೆ ಹೋಲಿಸಿದರೆ ಈಗಿನ ಬಡ್ಡಿ ದರವು ಶೇ 0.25ರಷ್ಟು ಜಾಸ್ತಿ ಇದೆ. ಎಸ್‌ಬಿಐ ಈಗ ಬಡ್ಡಿ ದರ ಹೆಚ್ಚಿಸಿರುವ ಕಾರಣ ಇತರ ಬ್ಯಾಂಕ್‌ಗಳೂ ಬಡ್ಡಿ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು