ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ ‘ವ್ಯವಸ್ಥೆಗೆ ಮುಖ್ಯವಾದ’ ಬ್ಯಾಂಕ್: ಆರ್‌ಬಿಐ
ಮುಂಬೈ: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳನ್ನು ‘ದೇಶಿ ವ್ಯವಸ್ಥೆಗೆ ಮುಖ್ಯವಾದ ಬ್ಯಾಂಕ್‌ಗಳು’ (ಡಿ–ಎಸ್‌ಐಬಿ) ಎಂದು ಗುರುತಿಸುವುದು ಮುಂದುವರಿಯುತ್ತದೆ ಎಂದು ಆರ್‌ಬಿಐ ಸೋಮವಾರ ಹೇಳಿದೆ.
ಈ ಮೂರು ಬ್ಯಾಂಕ್‌ಗಳನ್ನು ‘ದೇಶದ ಅರ್ಥ ವ್ಯವಸ್ಥೆಯ ಪಾಲಿಗೆ ಬಹುಮುಖ್ಯವಾದುವು’ ಎಂದು ಭಾವಿಸಲಾಗಿದೆ. ಇವುಗಳಿಗೆ ಸಮಸ್ಯೆ ಎದುರಾದರೆ ಸರ್ಕಾರವು ನೆರವಿಗೆ ಬರುತ್ತದೆ ಎಂಬ ನಿರೀಕ್ಷೆಯೂ ಇದೆ. ಈ ಬ್ಯಾಂಕ್‌ಗಳ ವಿಚಾರದಲ್ಲಿ ಇರುವ ಈ ಬಗೆಯ ಭಾವನೆಯ ಕಾರಣದಿಂದಾಗಿ, ಹಣಕಾಸು ಮಾರುಕಟ್ಟೆಯಲ್ಲಿ ಇವುಗಳಿಗೆ ಇತರ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಅನುಕೂಲಗಳು ಇವೆ.
ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ‘ಡಿ–ಎಸ್‌ಐಬಿ’ಗಳು ಎಂದು ಆರ್‌ಬಿಐ 2015 ಮತ್ತು 2016ರಲ್ಲಿ ಹೇಳಿತ್ತು. 2017ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕೂಡ ಈ ಹೆಗ್ಗಳಿಕೆ ದೊರೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.