ಭಾನುವಾರ, ಆಗಸ್ಟ್ 25, 2019
28 °C

ಎಸ್‌ಬಿಐ: ಬಡ್ಡಿ ದರ ಶೇ 0.15ರಷ್ಟು ಇಳಿಕೆ

Published:
Updated:

ಮುಂಬೈ (ಪಿಟಿಐ): ಆರ್‌ಬಿಐ ರೆಪೊ ದರ ತಗ್ಗಿಸಿದ ಬೆನ್ನಲ್ಲೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಸಾಲದ ಬಡ್ಡಿ ದರವನ್ನು ಶೇ 0.15ರಷ್ಟು ತಗ್ಗಿಸಿದೆ.

ರೆಪೊ ದರ ಆಧರಿಸಿದ ಬ್ಯಾಂಕ್‌ನ ಗೃಹ ಸಾಲಗಳು
ಶೇ 0.35ರಷ್ಟು ಅಗ್ಗವಾಗಲಿವೆ. ಈ ವರ್ಷದ ಜುಲೈ 1ರಿಂದ ಬ್ಯಾಂಕ್‌, ರೆಪೊ ಆಧರಿಸಿದ ಗೃಹ ಸಾಲ ನೀಡುತ್ತಿದೆ.

ಠೇವಣಿ ಮತ್ತು ರೆಪೊ ದರಗಳ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು (ಎಂಸಿಎಲ್‌ಆರ್‌) ಶೇ 8.40ರಿಂದ ಶೇ 8.25ಕ್ಕೆ ಇಳಿಸಲಾಗಿದೆ. ಹೊಸ ದರ ಇದೇ 10ರಿಂದ ಅನ್ವಯವಾಗಲಿದೆ.

Post Comments (+)