ಎಸ್‌ಬಿಐ ಲಾಭ ಶೇ 69ರಷ್ಟು ಹೆಚ್ಚಳ

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 69ರಷ್ಟು ಹೆಚ್ಚಾಗಿದ್ದು ₹ 8,890 ಕೋಟಿಗೆ ತಲುಪಿದೆ. ವಸೂಲಾಗದ ಸಾಲದಲ್ಲಿ (ಎನ್‌ಪಿಎ) ಇಳಿಕೆ ಆಗಿರುವುದೇ ಈ ಪ್ರಮಾಣದ ಲಾಭ ಗಳಿಕೆಗೆ ಕಾರಣ ಎಂದು ಬ್ಯಾಂಕ್ ಹೇಳಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹ 5,245 ಕೋಟಿ ಇತ್ತು ಎಂದು ಎಸ್‌ಬಿಐ, ಷೇರುಪೇಟೆಗೆ ಮಾಹಿತಿ ನೀಡಿದೆ. ಒಟ್ಟು ವರಮಾನವು ₹ 75,341 ಕೋಟಿಯಿಂದ ₹ 77,689 ಕೋಟಿಗೆ ಏರಿಕೆ ಆಗಿದೆ.
ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಕಾರ್ಯಾಚರಣಾ ಲಾಭವು ₹ 16,460 ಕೋಟಿಯಿಂದ ₹ 18,079 ಕೋಟಿಗೆ ಏರಿಕೆ ಆಗಿದ್ದು, ಶೇ 9.84ರಷ್ಟು ಹೆಚ್ಚಳ ಆದಂತಾಗಿದೆ. ವಸೂಲಾಗದ ಸಾಲದ ಸರಾಸರಿ (ಜಿಎನ್‌ಪಿಎ) ಪ್ರಮಾಣವು ಶೇ 5.28ರಿಂದ ಶೇ 4.90ಕ್ಕೆ ಇಳಿಕೆ ಆಗಿದೆ. ನಿವ್ವಳ ಎನ್‌ಪಿಎ ಸಹ ಶೇ 1.59ರಿಂದ ಶೇ 1.52ಕ್ಕೆ ಇಳಿಕೆ ಆಗಿದೆ.
ಎನ್‌ಪಿಎ ಇಳಿಕೆ ಆಗಿರುವುದರಿಂದಾಗಿ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವು ಶೇ 88.19 ರಿಂದ ಶೇ 87.68ಕ್ಕೆ ಇಳಿಕೆ ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.