ಮುಂಬೈ:ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಯೆಸ್ ಬ್ಯಾಂಕ್ನ ಶೇ 49ರಷ್ಟು ಪಾಲುಬಂಡವಾಳವನ್ನು ₹ 2,450 ಕೋಟಿಗೆ ಖರೀದಿಸುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಶನಿವಾರ ತಿಳಿಸಿದೆ.

ಬ್ಯಾಂಕ್ನ ಠೇವಣಿಗಳು ಮತ್ತು ಸಾಲಗಳು ಈಗಿರುವಂತೆಯೇ ಮುಂದುವರಿಯಲಿವೆ.ಯೆಸ್ ಬ್ಯಾಂಕ್, ₹2ರ ಮುಖಬೆಲೆಯ 255 ಕೋಟಿ ಷೇರುಗಳನ್ನು ಹೊಂದಿದೆ. ಇದರಲ್ಲಿ 245 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ ₹10ರಂತೆ ಎಸ್ಬಿಐ ಖರೀದಿಸಲಿದೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.

ಪುನಶ್ಚೇತನ ಯೋಜನೆಯಲ್ಲಿ, ಸಿಇಒ, ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷ ಮತ್ತು ನಿರ್ದೇಶಕರನ್ನು ಒಳಗೊಂಡಿರುವ ನಿರ್ದೇಶಕರ ಮಂಡಳಿ ರಚನೆ ಮಾಡಲಾಗುವುದು. ಆಡಳಿತ ಮಂಡಳಿಯಲ್ಲಿ ಎಸ್ಬಿಐನ ನಾಮನಿರ್ದೇಶಿತ ನಿರ್ದೇಶಕರನ್ನು ನೇಮಿಸಲಾಗುವುದು. ಅಧಿಕಾರಾವಧಿಯು ಒಂದು ವರ್ಷಗಳವರೆಗೆ ಅಥವಾ ಯೆಸ್ ಬ್ಯಾಂಕ್ ಲಿಮಿಟೆಡ್ ಪರ್ಯಾಯ ಮಂಡಳಿ ರಚಿಸುವವರೆಗೆ ಇರಲಿದೆ.

ಮರುಸ್ಥಾಪನೆ ಮಾಡುವ ಬ್ಯಾಂಕ್ನಲ್ಲಿ ಎಲ್ಲಾ ಸಿಬ್ಬಂದಿಯು ಕನಿಷ್ಠ ಒಂದು ವರ್ಷದವರೆಗೆ ಸದ್ಯ ಇರುವ ಹುದ್ದೆ ಮತ್ತು ಅದೇ ವೇತನದಲ್ಲಿಯೇ ಮುಂದುವರಿಯಬೇಕು.

ಮೋದಿ ಅವಧಿಯಲ್ಲಿ ಆರ್ಬಿಐ, ಹಣಕಾಸು ಸಚಿವಾಲಯದ ಇಲಾಖೆಯಂತಾಗಿದೆ. ಅದರ ಸ್ವಾಯತ್ತೆಯ ಮೇಲೆ ದಾಳಿ ನಡೆಸಲಾಗುತ್ತಿದೆ.
–ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

ಬಿಜೆಪಿ ಸರ್ಕಾರದಲ್ಲಿ ಹಣಕಾಸು ಸಂಸ್ಥೆಗಳ ಅಸಮರ್ಪಕ ನಿರ್ವಹಣೆಯಿಂದಾಗಿಯೇ ಯೆಸ್ ಬ್ಯಾಂಕ್ ಈ ಬಿಕ್ಕಟ್ಟಿಗೆ ಸಿಲುಕಿದೆ.
–ಪಿ. ಚಿದರಂಬರಂ, ಕಾಂಗ್ರೆಸ್ನ ಹಿರಿಯ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.