ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಸ್ವಾಧೀನಕ್ಕೆ ಬೇಕು ಸೆಬಿ ಅನುಮತಿ: ಎನ್‌ಡಿಟಿವಿ

Last Updated 25 ಆಗಸ್ಟ್ 2022, 13:06 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹಕ್ಕೆ ಸೇರಿದ ವಿಶ್ವಪ್ರಧಾನ್ ಕಮರ್ಷಿಯಲ್‌ ಪ್ರೈ.ಲಿ. (ವಿಸಿಪಿಎಲ್‌) ಕಂಪನಿಯು ಎನ್‌ಡಿಟಿವಿ ಪ್ರವರ್ತಕ ಕಂಪನಿ ಆರ್‌ಆರ್‌ಪಿಆರ್‌ ಲಿಮಿಟೆಡ್‌ನ ಷೇರುಗಳನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅನುಮೋದನೆ ಅಗತ್ಯವಿದೆ ಎಂದು ಎನ್‌ಡಿಟಿವಿ ಷೇರುಪೇಟೆಗೆ ಮಾಹಿತಿ ನೀಡಿದೆ.

ಆರ್‌ಆರ್‌ಪಿಆರ್‌ ಲಿಮಿಟೆಡ್‌ನ ಸಂಸ್ಥಾಪಕ, ಪ್ರವರ್ತಕರಾದ ಪ್ರಣಯ್ ರಾಯ್ ಹಾಗೂ ರಾಧಿಕಾ ರಾಯ್ ಅವರಿಗೆ ಷೇರುಗಳ ಖರೀದಿಗೆ, ಮಾರಾಟಕ್ಕೆ, ನೇರವಾಗಿ ಅಥವಾ ಪರೋಕ್ಷವಾಗಿ ಷೇರು ವ್ಯವಹಾರ ನಡೆಸುವುದಕ್ಕೆ ‘ಸೆಬಿ’ಯು 2020ರ ನವೆಂಬರ್ 27ರಂದು ಎರಡು ವರ್ಷಗಳ ಅವಧಿಗೆ ನಿರ್ಬಂಧ ಹೇರಿದೆ.

ಈ ನಿರ್ಬಂಧವು 2022ರ ನವೆಂಬರ್‌ 26ರವರೆಗೆ ಜಾರಿಯಲ್ಲಿ ಇರುತ್ತದೆ. ಈ ಆದೇಶದ ಕಾರಣದಿಂದಾಗಿ ‘ಆರ್‌ಆರ್‌ಪಿಆರ್‌ ಲಿಮಿಟೆಡ್‌ನ ಷೇರುಗಳ ಸ್ವಾಧೀನಕ್ಕೆ ಸೆಬಿ ಅನುಮತಿಯ ಅಗತ್ಯ ಇದೆ’ ಎಂದು ಎನ್‌ಡಿಟಿವಿ ಹೇಳಿದೆ. ಈ ವಿಚಾರವನ್ನು ವಿಸಿಪಿಎಲ್‌ಗೂ ತಿಳಿಸಲಾಗಿದೆ ಎಂದು ಎನ್‌ಡಿಟಿವಿ ಹೇಳಿದೆ.

ಎನ್‌ಡಿಟಿವಿ ಕಂಪನಿಯ ಶೇಕಡ 29.18ರಷ್ಟು ಷೇರುಗಳನ್ನು ತಾನು ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಅದಾನಿ ಸಮೂಹವು ಮಂಗಳವಾರ ಘೋಷಿಸಿದೆ. ಅಲ್ಲದೆ, ಎನ್‌ಡಿಟಿವಿಯಲ್ಲಿನ ಇನ್ನೂ ಶೇ 26ರಷ್ಟು ಷೇರುಗಳನ್ನು ಮಾರುಕಟ್ಟೆಯಿಂದ ಖರೀದಿಸಲು ತಾನು ಬಯಸಿರುವುದಾಗಿಯೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT