ಮುಂಬೈ: ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಆಗಿರುವ ಡ್ರೋನ್ ದಾಳಿಯು ಭಾರತದ ಷೇರುಪೇಟೆಗಳಲ್ಲಿ ಸೋಮವಾರ ಮಾರಾಟದ ಒತ್ತಡ ಸೃಷ್ಟಿಸಿದವು.

ಕಚ್ಚಾ ತೈಲ ದರ ಏರಿಕೆ ಆತಂಕದಲ್ಲಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಗಮನ ನೀಡಿದರು. ಇದರಿಂದ ಸೂಚ್ಯಂಕಗಳು ಎರಡು ವಾರಗಳ ವಹಿವಾಟಿನಲ್ಲಿಯೇ ಅತಿ ಹೆಚ್ಚಿನ ಇಳಿಕೆ ಕಂಡವು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 262 ಅಂಶ ಇಳಿಕೆಯಾಗಿ 37,123 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ 356 ಅಂಶಗಳವರೆಗೂ ಇಳಿಕೆಯಾಗಿತ್ತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 72 ಅಂಶ ಇಳಿಕೆಯಾಗಿ 11,003 ಅಂಶಗಳಿಗೆ ಇಳಿಕೆಯಾಯಿತು.

ನಷ್ಟ: ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಎಸ್‌ಬಿಐ, ಯೆಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ, ಟಾಟಾ ಸ್ಟೀಲ್ ಮತ್ತು ಎಲ್‌ಆ್ಯಂಡ್‌ಟಿ ಷೇರುಗಳು ಶೇ 2.55ರಷ್ಟು ಇಳಿಕೆ ಕಂಡಿವೆ.

ಗಳಿಕೆ: ಟೆಕ್ ಮಹೀಂದ್ರಾ, ಒಎನ್‌ಜಿಸಿ, ಸನ್ ಫಾರ್ಮಾ, ಎಚ್‌ಯುಎಲ್, ಟಿಸಿಎಸ್ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಶೇ 1.44ರವರೆಗೂ ಏರಿಕೆ ಕಂಡಿವೆ. ಬಿಎಸ್‌ಇನಲ್ಲಿ ತೈಲ ಮತ್ತು ಅನಿಲ ಹಾಗೂ ಇಂಧನ ವಲಯದ ಷೇರುಗಳು ಕ್ರಮವಾಗಿ ಶೇ 1.61 ಮತ್ತು ಶೇ 1.33ರಷ್ಟು ಇಳಿಕೆ ಕಂಡವು. ವಲಯವಾರು ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ವಾಹನ ಮತ್ತು ಭಾರಿ ಯಂತ್ರೋಪಕರಣಗಳ ಷೇರುಗಳಿಗೂ ನಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.