ಗುರುವಾರ , ಸೆಪ್ಟೆಂಬರ್ 19, 2019
26 °C

ಷೇರುಪೇಟೆ ಸೂಚ್ಯಂಕ ಏರಿಕೆ; ಮುಂದುವರಿಯುವುದೇ ಗೂಳಿ ಓಟ?

Published:
Updated:

ಮುಂಬೈ: ಕುಸಿತ ಹಾದಿ ಹಿಡಿದಿದ್ದ ಷೇರುಪೇಟೆ ಸೂಚ್ಯಂಕ ಸೋಮವಾರ ಏರಿಕೆ ಕಂಡಿದೆ. ಆರ್ಥಿಕತೆಯ ಪುನಶ್ಚೇತನಕ್ಕೆ ಸರ್ಕಾರ ಹಲವು ಕ್ರಮಗಳನ್ನು ಪ್ರಕಟಿಸಿರುವುದರ ಪರಿಣಾಮ ಸೋಮವಾರ ಬಿಎಸ್‌ಇ ಸೆನ್ಸೆಕ್ಸ್‌ 393.76 ಅಂಶ ಹೆಚ್ಚಳ ಕಂಡಿತು. 

ಹೂಡಿಕೆದಾರರ ತೋರಿರುವ ವಿಶ್ವಾಸದಿಂದ ಸೆನ್ಸೆಕ್ಸ್‌ 37,094.92 ಹಾಗೂ ನಿಫ್ಟಿ 11,000.55 ಅಂಶ ತಲುಪಿತು. ಬ್ಯಾಂಕಿಂಗ್‌, ಹಣಸಕಾಸು ಸೇವೆಗಳು ಹಾಗೂ ಮೂಲಸೌಕರ್ಯ ವಲಯದ ಷೇರುಗಳು ಏರಿಕೆ ದಾಖಲಿಸಿದರೆ, ಮಾಹಿತಿ ತಂತ್ರಜ್ಞಾನ ಮತ್ತು ಲೋಹ ವಲಯದ ಷೇರುಗಳಲ್ಲಿ ಕುಸಿತ ಕಂಡಿದೆ. 

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಷೇರುಗಳ ವರ್ಗಾವಣೆಯ ಅಲ್ಪಾವಧಿ ಮತ್ತು ದೀರ್ಘಾವಧಿ ಲಾಭ ಗಳಿಕೆ ಮೇಲಿನ ಸರ್ಚಾರ್ಜ್‌ ಹಿಂತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಸಕಾರಾತ್ಮಕ ವಹಿವಾಟು ನಿರೀಕ್ಷಿಸಲಾಗಿದೆ. ಆದರೆ, ವಹಿವಾಟು ಶುರುವಾಗಿ ಕೆಲವೇ ನಿಮಿಷಗಳಲ್ಲಿ ಮಾರಾಟದ ಒತ್ತಡದಿಂದಾಗಿ ಸೂಚ್ಯಂಕ ದಿಢೀರ್‌ ಕುಸಿಯಿತು. 

ಎಸ್‌ಬಿಐ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಎಚ್‌ಡಿಎಫ್‌ಸಿ, ಯೆಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎಲ್‌ ಆ್ಯಂಡ್‌ ಟಿ, ಐಟಿಸಿ ಹಾಗೂ ಆಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ 3ರಷ್ಟು ಏರಿಕೆಯಾಗಿವೆ. ವೇದಾಂತ, ಟಾಟಾ ಸ್ಟೀಲ್‌, ಇಂಡಸ್‌ಇಂಡ್‌ ಬ್ಯಾಂಕ್‌, ಸನ್‌ ಫಾರ್ಮಾ, ಎಚ್‌ಸಿಎಲ್‌ ಟೆಕ್‌ ಹಾಗೂ ಹೀರೊ ಮೊಟೊಕಾರ್ಪ್‌ ಷೇರುಗಳು ಶೇ 4ರಷ್ಟು ಕುಸಿದಿವೆ..

Post Comments (+)