ಬುಧವಾರ, ಫೆಬ್ರವರಿ 19, 2020
31 °C

ಸೂಚ್ಯಂಕ 350 ಅಂಶ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಎಫ್‌ಎಂಸಿಜಿ, ಬ್ಯಾಂಕ್‌ ಮತ್ತು ಐ.ಟಿ ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 350 ಅಂಶ ಹೆಚ್ಚಾಗಿ 41,566 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 94 ಅಂಶ ಹೆಚ್ಚಾಗಿ 12,201 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗರಿಷ್ಠ ಗಳಿಕೆ: ಎಚ್‌ಯುಎಲ್‌ ಷೇರು ಶೇ 5ರಷ್ಟು ಗರಿಷ್ಠ ಏರಿಕೆ ಕಂಡಿದೆ. 

ಕೋಟಕ್ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ನೆಸ್ಲೆ ಇಂಡಿಯಾ, ಆರ್‌ಐಎಲ್‌, ಮಹೀಂದ್ರಾ ಮತ್ತು ಏಷ್ಯನ್ ಪೇಂಟ್ಸ್‌ ಷೇರುಗಳ ಮೌಲ್ಯದಲ್ಲಿಯೂ ಏರಿಕೆ ಆಗಿದೆ.

ಕೊರೊನಾ ವೈರಸ್‌ ಸೋಂಕಿನ ಹೊಸ ಪ್ರಕರಣ ಪತ್ತೆಯಾಗದೇ ಇರುವುದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಇದು ದೇಶಿ ಷೇರುಪೇಟೆಯ ಮೇಲೂ ಪ್ರಭಾವ ಬೀರಿತು ಎಂದು ವರ್ತಕರು ಹೇಳಿದ್ದಾರೆ. ಜನವರಿಯಲ್ಲಿ ಕೊರೊನಾ ವೈರಸ್‌ ಸೋಂಕಿಗೆ ತುತ್ತಾದವರ ಸಂಖ್ಯೆ ಕಡಿಮೆಯಾಗಿದೆ ಎಂದು ಚೀನಾ ಹೇಳಿದೆ.

ಬ್ರೆಂಟ್ ತೈಲ ದರ ಶೇ 2.20ರಷ್ಟು ಏರಿಕೆಯಾಗಿ ಒಂದು ಬ್ಯಾರೆಲ್‌ಗೆ 55.20 ಡಾಲರ್‌ಗಳಿಗೆ ತಲುಪಿದೆ. ಶಾಂಘೈ, ಹಾಂಗ್‌ಕಾಂಗ್‌, ಟೋಕಿಯೊದಲ್ಲಿ ಹಾಗೂ ಯುರೋಪ್‌ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 5 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹71.33ರಂತೆ ವಿನಿಮಯಗೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು