ಗುರುವಾರ , ನವೆಂಬರ್ 26, 2020
20 °C

6 ತಿಂಗಳಲ್ಲಿ ಸಕಾರಾತ್ಮಕ ಮಟ್ಟಕ್ಕೆ ರಿಯಲ್‌ ಎಸ್ಟೇಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮದ ಚಟುವಟಿಕೆ ನಿರಾಶಾದಾಯಕವಾಗಿದ್ದರೂ, ಬೇಡಿಕೆ ಚೇತರಿಸಿಕೊಳ್ಳುತ್ತಿರುವುದರಿಂದ ಮುಂದಿನ ಆರು ತಿಂಗಳಲ್ಲಿ ಈ ವಲಯವು ಸಕಾರಾತ್ಮಕ ಹಾದಿಗೆ ಮರಳಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ನೈಟ್‌ ಫ್ರ್ಯಾಂಕ್‌–ಫಿಕ್ಕಿ–ನರೇಡ್ಕೊ ಸಂಸ್ಥೆಗಳು ಜಂಟಿಯಾಗಿ ‘ರಿಯಲ್‌ ಎಸ್ಟೇಟ್‌ ಸೆಂಟಿಮೆಂಟ್‌ ಇಂಡೆಕ್ಸ್‌ ಕ್ಯು3 2020’ ಸಮೀಕ್ಷೆಯ ವರದಿಯನ್ನು ಗುರುವಾರ ಬಿಡುಗಡೆ ಮಾಡಿವೆ. ನಿರ್ಮಾಣಗಾರರು, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ಖಾಸಗಿ ಷೇರು ಪಾಲುದಾರರ ಮಾಹಿತಿಗಳನ್ನು ಈ ವರದಿಯು ಒಳಗೊಂಡಿದೆ.

ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿನ ರಿಯಲ್‌ ಎಸ್ಟೇಟ್ ಚಟುವಟಿಕೆಗಳಿಗೆ ಸಂಬಂಧಿಸಿದ ಸೂಚ್ಯಂಕ 40ರಷ್ಟಿದ್ದು, ನಿರಾಶಾದಾಯಕ ಮಟ್ಟದಲ್ಲಿದೆ. ಇದಕ್ಕೂ ಹಿಂದಿನ ತ್ರೈಮಾಸಿಕದ ಅವಧಿಯಲ್ಲಿದ್ದ 22ಕ್ಕೆ ಹೋಲಿಸಿದರೆ ತುಸು ಸುಧಾರಣೆ ಕಂಡುಬಂದಿದೆ. ಆದರೆ, ಆಶಾದಾಯಕ ಎಂದು ಪರಿಗಣಿಸಬೇಕಾದರೆ 50 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿರಬೇಕಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮುಂದಿನ ಆರು ತಿಂಗಳಲ್ಲಿ ಸೂಚ್ಯಂಕವು 52ರಷ್ಟಿರಲಿದ್ದು, ಅಶಾದಾಯಕ ಸ್ಥಿತಿಯಲ್ಲಿ ಇರಲಿದೆ ಎಂದು ವರದಿ ಹೇಳಿದೆ. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿರುವುದರಿಂದ ಮೂರನೇ ತ್ರೈಮಾಸಿಕದಲ್ಲಿ ವಸತಿ ವಿಭಾಗವು ಚೇತರಿಕೆ ಕಂಡುಕೊಳ್ಳುತ್ತಿದೆ ಎಂದು ನೈಟ್ ಫ್ರ್ಯಾಂಕ್‌ ಹೇಳಿದೆ.

ಮುಂದಿನ ಆರು ತಿಂಗಳುಗಳಲ್ಲಿ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬರಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 57ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ರಿಯಲ್‌ ಎಸ್ಟೇಟ್‌ ವಲಯದಲ್ಲಿನ ಹೂಡಿಕೆಯಲ್ಲಿಯೂ ಸುಧಾರಣೆ ಕಂಡುಬಂದಿದೆ. ಆರು ತಿಂಗಳಿನಲ್ಲಿ ಹೂಡಿಕೆಯು ಹೆಚ್ಚಾಗಲಿದೆ ಎಂದು ಶೇ 38ರಷ್ಟು ಮಂದಿ ಹೇಳಿದ್ದರೆ, ಹೂಡಿಕೆಯು ಈಗಿರುವ ಮಟ್ಟದಲ್ಲಿಯೇ ಇರಲಿದೆ ಎಂದು ಶೇ 31ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು