ಗುರುವಾರ , ಏಪ್ರಿಲ್ 2, 2020
19 °C

ಚಿನ್ನದ ದರ ಗರಿಷ್ಠ ₹1,840 ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ : ದೇಶದಾದ್ಯಂತ ಚಿನ್ನದ ದರ 10 ಗ್ರಾಂಗೆ ಗರಿಷ್ಠ ₹ 1,840ರವರೆಗೂ ಏರಿಕೆಯಾಗಿದೆ.

10 ಗ್ರಾಂ ಚಿನ್ನದ ದರ ಮುಂಬೈನಲ್ಲಿ ₹ 1,840ರಂತೆ ಹೆಚ್ಚಾಗಿ₹ 43,415ರಂತೆ ಮಾರಾಟವಾಯಿತು. ದೆಹಲಿಯಲ್ಲಿ ₹ 953 ರಂತೆ ಏರಿಕೆ ಕಂಡು ₹ 44,472ರಂತೆ ಹಾಗೂ ಬೆಂಗಳೂರಿನಲ್ಲಿ ₹ 919ರಂತೆ ಹೆಚ್ಚಾಗಿ₹ 43,640ಕ್ಕೆ ತಲುಪಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರ ಭಾರಿ ಏರಿಕೆ ಕಾಣುವಂತಾಯಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ಬೆಳ್ಳಿ ದರ: ಬೆಳ್ಳಿ ದಾರಣೆ ಕೆ.ಜಿಗೆ ಮುಂಬೈನಲ್ಲಿ ₹ 1,430ರಂತೆ ಹೆಚ್ಚಾಗಿ ₹49,035, ದೆಹಲಿಯಲ್ಲಿ ₹ 586ರಂತೆ ಹೆಚ್ಚಾಗಿ ₹ 49,990ರಂತೆ ಹಾಗೂ ಬೆಂಗಳೂರಿನಲ್ಲಿ ₹ 700ರಂತೆ ಏರಿಕೆಯಾಗಿ ₹ 49,500ರಂತೆ ಮಾರಾಟವಾಯಿತು.

ರೂಪಾಯಿ 34 ಪೈಸೆ ಕುಸಿತ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 34 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ ಮೂರು ತಿಂಗಳ ಕನಿಷ್ಠ ಮಟ್ಟವಾದ ₹ 71.98ರಂತೆ ವಿನಿಮಯಗೊಂಡಿತು.

ತೈಲ ದರ ಇಳಿಕೆ: ಕೋವಿಡ್‌ ಹರಡುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಸೋಮವಾರ ಕಚ್ಚಾ ತೈಲ ದರ ಶೇ 4ರಷ್ಟು ಇಳಿಕೆ ಕಂಡಿದೆ. ಒಂದು ಬ್ಯಾರೆಲ್‌ಗೆ 56.11 ಡಾಲರ್‌ಗಳಂತೆ ಮಾರಾಟವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು